ಅ.13ರಂದು ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ತುಳು ಅಕಾಡೆಮಿ ಸಿರಿಚಾವಡಿ ಪುರಸ್ಕಾರ – Vishwanews24
ಅ.13ರಂದು ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ತುಳು ಅಕಾಡೆಮಿ ಸಿರಿಚಾವಡಿ ಪುರಸ್ಕಾರ
ಮಂಗಳೂರು: ಅಕಾಡೆಮಿ ವತಿಯಿಂದ ಅಕ್ಟೋಬರ್ 13 ರಂದು ಗೋವಿಂದದಾಸ ಕಾಲೇಜು ಸುರತ್ಕಲ್‍ನಲ್ಲಿ “ಸಿರಿಚಾವಡಿ ಪುರಸ್ಕಾರ” ಕಾರ್ಯಕ್ರಮ ನಡೆಯಲಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಅಕಾಡೆಮಿವತಿಯಿಂದ ಗೌರವಿಸಲಾಗುವುದು.
ಕಾರ್ಯಕ್ರಮವನ್ನು ಶ್ರೀ ಶ್ರೀರಂಗ ಹೊಸಬೆಟ್ಟು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳು ಅಕಾಡೆಮಿ ಅಧ್ಯಕ್ಷರಾದ ದಯಾನಂದ ಜಿ. ಕತ್ತಲ್‍ಸಾರ್ ವಹಿಸಿಕೊಳ್ಳಲಿದ್ದಾರೆ. ಸನ್ಮಾನ್ಯ ಶಾಸಕರಾದ ಡಾ| ವೈ. ಭರತ್ ಶೆಟ್ಟಿ ವಿವಿಧ ಕ್ಷೇತ್ರದ ಸಾಧಕರನ್ನು ಪುರಸ್ಕರಿಸಲಿದ್ದಾರೆ. ಹಾಗೂ ಅಕಾಡೆಮಿ ವತಿಯಿಂದ ಕೊಡಲ್ಪಡುವ ಅಕಾಡೆಮಿ ಪ್ರಕಟಿತ ಪುಸ್ತಕಗಳ ತುಳು ಪುಸ್ತಕ ಭಂಡಾರವನ್ನು ರೊ. ಅಶೋಕ್ ಎನ್ ಸುರತ್ಕಲ್. ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕಾಪೆರ್Çೀರೇಟರ್, ವರುಣ್ ಚೌಟ, ಯಕ್ಷಗಾನ ಅಕಾಡೆಮಿ ಸದಸ್ಯ ಶ್ರೀ ಮಾಧವ ಭಂಡಾರಿ, ಕುಳಾಯಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಶ್ರೀ ಸುಧಾಕರ ಪೂಂಜ, ಸುರತ್ಕಲ್ ಕುಲಾಲ ಸಂಘದ ಅಧ್ಯಕ್ಷ ಮೋಹನ್ ಐ ಮೂಲ್ಯ, ಕುಳಾಯಿ, ಬ್ರಹ್ಮಶ್ರೀ ನಾರಾಯಣ ಗುರು ಸಂಘದ ಅಧ್ಯಕ್ಷ ಶ್ರೀ ಗೋಪಾಲ ಬಂಗೇರ ಕೆ. ಅಗರಿ ಎಂಟರ್‍ಪ್ರೈಸಸ್‍ನ ಮಾಲಕರಾದ ಅಗರಿ ಶ್ರೀ ರಾಘವೇಂದ್ರ ರಾವ್, ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೃಷ್ಣಮೂರ್ತಿ ಹಾಗೂ ಕಾರ್ಯಕ್ರಮದ ಸದಸ್ಯ ಸಂಚಾಲಕ ಅಕಾಡೆಮಿ ಸದಸ್ಯರಾದ ನಾಗೇಶ್ ಕುಲಾಲ್ ಭಾಗವಹಿಸಲಿದ್ದಾರೆ.
