ಅ.5ರಂದು ನಾಡೋಜ ಡಾ| ಜಿ. ಶಂಕರ್ 69ನೇ ಹುಟ್ಟುಹಬ್ಬ ; ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಚಂಡಿಕಾಯಾಗ – vishwanews24
ಅ.5ರಂದು ನಾಡೋಜ ಡಾ| ಜಿ. ಶಂಕರ್ 69ನೇ ಹುಟ್ಟುಹಬ್ಬ ; ಉಚ್ಚಿಲ ದೇವಸ್ಥಾನದಲ್ಲಿ ಚಂಡಿಕಾಯಾಗ
ಮಲ್ಪೆ: ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್ ಅವರ 69ನೇ ಹುಟ್ಟುಹಬ್ಬದ ಪ್ರಯುಕ್ತ ಅ. 5ರಂದು ಜಿಲ್ಲಾ ಮೊಗವೀರ ಯುವ ಸಂಘಟನೆಯ ವಿವಿಧ ಘಟಕ ವ್ಯಾಪ್ತಿಯಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ಬೈಂದೂರು-ಶಿರೂರು, ಹೆಮ್ಮಾಡಿ, ಕುಂದಾಪುರ ಕೋಟೇಶ್ವರ, ಕೋಟ, ಸಾಲಿಗ್ರಾಮ, ಹಾಲಾಡಿ, ಮಂದಾರ್ತಿ, ಬ್ರಹ್ಮಾವರ, ಕೋಡಿಬೆಂಗ್ರೆ, ಪಡುತೋನ್ಸೆ ಬೆಂಗ್ರೆ, ಹಿರಿಯಡಕ, ಮಲ್ಪೆ, ಉಪ್ಪೂರು, ಬೆಳ್ಳಂಪಳ್ಳಿ, ಉದ್ಯಾವರ, ದೊಡ್ಡಣಗುಡ್ಡೆ ಘಟಕಗಳಲ್ಲಿ ಅಶಕ್ತರಿಗೆ ಅನಾರೋಗ್ಯ ಪೀಡಿತರಿಗೆ ಧನಸಹಾಯ, ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಹಾಗೂ ಶಾಲಾ ಮಕ್ಕಳಿಗೆ ಸಿಹಿ ತಿಂಡಿ ಹಾಗೂ ಊಟದ ವ್ಯವಸ್ಥೆ, ಕಲಿಕಾ ಸಾಮಗ್ರಿ, ದಿನಸಿ ಸಾಮಗ್ರಿ, ಬಡ ವಿದ್ಯಾರ್ಥಿಗಳಿಗೆ ಸಹಾಯಧನ ಹಾಗೂ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಗುವುದು. ಜತೆಗೆ ಗೋ ಶಾಲೆಗೆ ಮೇವು ಮತ್ತು ಪಶು ಆಹಾರ ನೀಡಲಾಗುವುದು ಎಂದು ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಜಯಂತ್ ಅಮೀನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಉಚ್ಚಿಲ ದೇವಸ್ಥಾನದಲ್ಲಿ ಚಂಡಿಕಾಯಾಗ
ಡಾ| ಜಿ. ಶಂಕರ್ ಹುಟ್ಟುಹಬ್ಬದ ಸಲುವಾಗಿ ಅ. 5ರಂದು ಮಧ್ಯಾಹ್ನ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ದೇಗುಲದ ಆಡಳಿತ ಸಮಿತಿ ವತಿಯಿಂದ ಮಧ್ಯಾಹ್ನ ಚಂಡಿಕಾಹೋಮ ಸಹಿತ ವಿಶೇಷ ಪೂಜೆ ನಡೆಯಲಿದೆ ಎಂದು ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ತಿಳಿಸಿದ್ದಾರೆ.
