ಆಕಾಶದಲ್ಲಿ ವಿಸ್ಮಯ : ನಕ್ಷತ್ರದಂತೆ ಹೊಳೆಯುತ್ತಿರುವ ಪ್ರಕಾಶಮಾನವಾದ ಚುಕ್ಕಿಗಳ ಮೆರವಣಿಗೆ – Vishwanews24

Featured, ಉಡುಪಿ, ದಕ್ಷಿಣ ಕನ್ನಡ, ರಾಜ್ಯ ನ್ಯೂಸ್

ಆಕಾಶದಲ್ಲಿ ವಿಸ್ಮಯ : ನಕ್ಷತ್ರದಂತೆ ಹೊಳೆಯುತ್ತಿರುವ ಪ್ರಕಾಶಮಾನವಾದ ಚುಕ್ಕಿಗಳ ಮೆರವಣಿಗೆ – Vishwanews24

ಉಡುಪಿ : ಅವಿಭಜಿತ ಜಿಲ್ಲೆಯಲ್ಲಿ ಸೋಮವಾರ ಡಿಸೆಂಬರ್ 20 ರ ಸಂಜೆ ಆಕಾಶದಲ್ಲಿ ನಕ್ಷತ್ರದಂತೆ ಹೊಳೆಯುತ್ತಿರುವ ಪ್ರಕಾಶಮಾನವಾದ ದೀಪಗಳಂತಿರುವ ನಿಗೂಢ ಹಾರುವ ವಸ್ತುವನ್ನು ಕಂಡು ಹಲವರು ಅಚ್ಚರಿ ವ್ಯಕ್ತಪಡಿಸಿದರು.

ಆದರೆ ಇದು ಖಾಸಗಿ ಟೆಲಿಕಾಂ ಕಂಪನಿಗಳು ಬಿಡುವ ಕೃತಕ ಉಪಗ್ರಹಗಳಾಗಿವೆ ಎಂದು ಖಗೋಳಶಾಸ್ತಜ್ಞರು ತಿಳಿಸಿದ್ದಾರೆ. ಸ್ಟಾರ್ ಲಿಂಕ್ ಸಹಿತ ಕೆಲವೊಂದು ಪ್ರಮುಖ ಸ್ಯಾಟಲೈಟ್ ಕಂಪನಿಗಳು 30 ರಿಂದ 50 ರಷ್ಟು ಗುಚ್ಚಗಳನ್ನು ಹೊಂದಿರುವ ಕೃತಕ ಉಪಗ್ರಹ ಗಳನ್ನು ಹಾರಿಬಿಟ್ಟಿದೆ. ಈ ಹಿಂದೆ ಒಂದು ಎರಡು ಉಪಗ್ರಹಗಳು ಮಾತ್ರ ಗೋಚರಿಸುತ್ತಿದ್ದವು. ಇದು ಭೂಮಿಯಿಂದ 200 ರಿಂದ 300 ಕಿ.ಮೀ ಎತ್ತರದಲ್ಲಿ ಹಾರಾಡುತ್ತಿದ್ದು ಸೂರ್ಯ ಪಶ್ಚಿಮಕ್ಕೆ ಹೋದಂತೆ ಪ್ರತಿಫಲಿಸತೊಡಗಿದೆ.

ಬಾಹ್ಯಾಕಾಶ ಉದ್ಯಮಿ ಎಲಾನ್‌ ಮಸ್ಕ್ ಅವರ ‘ಸ್ಟಾರ್‌ ಲಿಂಕ್‌’ಎಂಬ ಸುಮಾರು 12 ಸಾವಿರ ಕೃತಕ ಉಪಗ್ರಹಗಳನ್ನುಆಕಾಶಕ್ಕೆ ಹಾರಿ ಬಿಡುವ ಭಾರಿ ಯೋಜನೆಯೊಂದನ್ನು ಸದ್ಯ ಹಾಕಿಕೊಂಡಿದ್ದಾರೆ. ಭವಿಷ್ಯದಲ್ಲಿ ಈ ರೀತಿ ಹಾರಿಬಿಡುವ ಉಪಗ್ರಹಗಳ ಸಂಖ್ಯೆ 42 ಸಾವಿರ ದಾಟುವ ಸಾಧ್ಯತೆಯೂ ಇದೆ. ಅದರಂತೆ ಈಗಾಗಲೇ ಕೃತಕ ಉಪಗ್ರಹಗಳ ಒಂದು ಗುಚ್ಛ (60 ಉಪಗ್ರಹಗಳು) ನ್ನು ಹಾರಿಬಿಟ್ಟಿದ್ದಾರೆ. ಅವು ಭೂಮಿಯ ಸುತ್ತ ತಿರುಗುತ್ತಾ ಪ್ರತಿಮನೆಗೂ ವಯರ್‌ಲೆಸ್‌ ಇಂಟರ್‌ನೆಟ್‌ ಸೇವೆಯನ್ನು ನೀಡಲಿವೆ.

ಈ ಕೌತುಕವನ್ನು ಉಡುಪಿ , ದ.ಕ ಸೇರಿದಂತೆ ಕರಾವಳಿಯ ಎಲ್ಲೆಡೆ ಈ ಕೌತುಕ ಕಾಣಿಸಿದ್ದು, ಕುತೂಹಲ ಜನರು ತಮ್ಮ ಮೊಬೈಲ್ ಪೋನ್ ಗಳಲ್ಲಿ ಚಿತ್ರೀಕರಿಸಿದ್ದು ಜನರು ತಮ್ಮ ಮೊಬೈಲ್ ಪೋನ್ ಗಳಲ್ಲಿ ಚಿತ್ರೀಕರಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಓಮಿಕ್ರಾನ್ ಆತಂಕ: ರಾಜ್ಯದಲ್ಲಿ ನೈಟ್ ಕರ್ಫ್ಯೂ, ಕಟ್ಟುನಿಟ್ಟಿನ ನಿರ್ಬಂಧ ಜಾರಿಗೆ ತಜ್ಞರ ಸಲಹೆ – VIshwanews24