“ಆತ್ಮನಿರ್ಭರ ಭಾರತ”ದ ಮಹತ್ವದ ಕುರಿತು ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ಭಾಷಣ – Vishwanews24

Featured, ರಾಷ್ಟ್ರ ನ್ಯೂಸ್

“ಆತ್ಮನಿರ್ಭರ ಭಾರತ”ದ ಮಹತ್ವದ ಕುರಿತು ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ಭಾಷಣ – Vishwanews24

ನವದೆಹಲಿ : ಕೇಂದ್ರ ಬಜೆಟ್‌ ಮಂಡನೆಯಾದ ಹಿನ್ನಲೆಯಲ್ಲಿ ಆತ್ಮನಿರ್ಭರ ಭಾರತದ ಮಹತ್ವವನ್ನು ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ  ದೇಶವನ್ನುದ್ದೇಶಿಸಿ ಇಂದು ಬೆಳಿಗ್ಗೆ 11 ಗಂಟೆಗೆ ಭಾಷಣ ಮಾಡಲಿದ್ದಾರೆ. ಈ ಭಾಷಣವನ್ನು ಪ್ರಸಾರ ಮಾಡಲು ಬೃಹತ್‌ ಸ್ಕ್ರೀನ್‌ಗಳನ್ನು ಅಳವಡಿಸಲಾಗುತ್ತದೆ.

ದೆಹಲಿಯ ಅಂಬೇಡ್ಕರ್‌ ಭವನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ.

ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಪರದೆ ಹಾಕಿ ಆನ್‌ಲೈನ್‌ ಮೂಲಕ ಪ್ರಸಾರ ಮಾಡಲಾಗುವುದು. ಜಿಲ್ಲಾ ಕೇಂದ್ರದಲ್ಲಿ 150ಕ್ಕೂ ಹೆಚ್ಚು ಕಾರ್ಯಕರ್ತರು, ಸಂಸದರು, ಶಾಸಕರು, ಸಚಿವರು, ಆರ್ಥಿಕ ತಜ್ಞರೂ ಭಾಗವಹಿಸುವರು.

Leave a Reply