ಆಧಾರ್ ಕಾರ್ಡ್ ಕಳೆದು ಹೋದರೆ ಆನ್ ಲೈನ್ ನಲ್ಲಿ ಹೊಸ ಕಾರ್ಡ್ ಪಡೆಯಿರಿ…- Vishwanews24
ನಿಮಗೆ ಹೊಸ ಆಧಾರ್ ಕಾರ್ಡ್ ಸಿಗುವವರೆಗೆ UIDAI ವೆಬ್ಸೈಟ್ಗೆ ಭೇಟಿ ನೀಡಿ ಆಧಾರ್ ಕಾರ್ಡ್ ಅನ್ನು ಮುದ್ರಿಸಬಹುದು. , ನೀವು ನೋಂದಾಯಿತ ಸಂಖ್ಯೆಯನ್ನು ಹೊಂದಿರುವಿರಿ. ಆಧಾರ್ ಬಗೆಗಿನ ಇತರ ಮಾಹಿತಿ ನಿಮಗೆ ತಿಳಿದಿದೆ. OTP ನಿಮ್ಮ ಲಿಂಕ್ ಮಾಡಲಾದ ನಂಬರ್ ಗೆ ಬರುತ್ತದೆ. ಆಧಾರ್ ಮರುಮುದ್ರಣ ಮಾಡಲು ಇದು ಬಹಳ ಸುಲಭ ಮಾರ್ಗವಾಗಿದೆ.
ಇದಕ್ಕಾಗಿ, ಮೊದಲಿಗೆ ಯುಐಡಿಎಐ ವೆಬ್ಸೈಟ್ಗೆ ಹೋಗಿ ಆಧಾರ್ ಮರುಮುದ್ರಣ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ. ವಿವರಗಳು ತೆರೆದ ನಂತರ, 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ. ಇದಲ್ಲದೆ, ಇತರ ಮಾಹಿತಿ, ಹೆಸರು, ಹುಟ್ಟಿದ ದಿನಾಂಕ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಗಳನ್ನು ಭರ್ತಿ ಮಾಡಿ. ಪ್ರಕ್ರಿಯೆ ಮುಗಿದ ನಂತರ, ಆಧಾರ್ ಕಾರ್ಡ್ ಕಾಪಿ ತೆರೆದುಕೊಳ್ಳುತ್ತದೆ.
ಅದಕ್ಕಾಗಿ ಪ್ರತಿಯೊಬ್ಬರೂ ನಿಮ್ಮ ಆಧಾರ್ ಫೋಟೋ ಪ್ರತಿಯನ್ನು ಮರೆಯದೇ ಇರಿಸಿಕೊಳ್ಳಿ. ಏಕೆಂದರೆ, ನಿಮ್ಮ ಅಸಲಿ ಆಧಾರ್ ಕಾರ್ಡ್ ಕಳೆದು ಹೋದರೂ ಸಹ, ನಿಮ್ಮ ಆಧಾರ್ ಅನ್ನು ಮತ್ತೆ ಪಡೆಯಲು ಇದು ಸಹಕಾರಿಯಾಗುತ್ತದೆ.
1. ಯುಐಡಿಎಐ ಅಧಿಕೃತ ವೆಬ್ ಸೈಟ್ www.uidai.gov.in ಗೆ ಹೋಗಿ ಸೆಲೆಕ್ಷನ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತ್ರ ರೆಸಿಡೆಂಟ್ ಪೋರ್ಟಲ್ ಮೇಲೆ ಕ್ಲಿಕ್ ಮಾಡಿ.
2. ನಿಮ್ಮ ನೋಂದಣಿ ಸಂಖ್ಯೆ ವಿವರ ಸಲ್ಲಿಸಿ(ನೋಂದಣಿ ಸಂಖ್ಯೆ, ದಿನಾಂಕ, ಸಮಯ, ನಿವಾಸ ಹೆಸರು ಹಾಗೂ ಪಿನ್ ಕೋಡ್) ಆಧಾರ್ ರಸೀತಿ ಸ್ಲಿಪ್ ನಲ್ಲಿರುವಂತೆ.
3. ಅಥವಾ ಆಧಾರ್ ಕಾರ್ಡ್ ನಂಬರ್ ಹಾಕಿ.
4. ಮೇಲ್ಭಾಗದಲ್ಲಿರುವ I Have ಅಡಿಯಲ್ಲಿರುವ ಆಧಾರ್ ಆಯ್ಕೆಯನ್ನು ಸೂಚಿಸಿ.
5. ನಿಮ್ಮ ನೋಂದಾಯಿತ ಮೊಬೈಲ್ ಫೋನಿಗೆ One Time Pin ಬರುತ್ತದೆ.
6. OTP ನಮೂದಿಸಿ
7. ನಕಲಿ ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳುವ ಆಯ್ಕೆ ನಿಮ್ಮ ಮುಂದೆ ಬರಲಿದೆ.
ಪಿಡಿಎಫ್ ಮಾದರಿಯಲ್ಲಿ ಲಭ್ಯವಾಗಲಿರುವ ಆಧಾರ್ ಕಾರ್ಡ್ ಪಾಸ್ ವರ್ಡ್ ನಿಂದ ಸುರಕ್ಷಿತವಾಗಿರುತ್ತದೆ. ಪಾಸ್ ವರ್ಡ್ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಈ ಬಗೆ ಇ ಮೇಲ್ ಕಳಿಸಲಾಗುತ್ತದೆ. ಅಥವಾ ಎಸ್ ಎಂಎಸ್ ಬರುತ್ತದೆ. ನಿಮ್ಮ ಪಿನ್ ಕೋಡ್ ಸಂಖ್ಯೆಯನ್ನೇ ಪಾಸ್ ವರ್ಡ್ ಆಗಿ ನೀಡಲಾಗಿರುತ್ತದೆ. ಪಾಸ್ ವರ್ಡ್ ಹಾಕಿ ಆಧಾರ್ ಕಾರ್ಡ್ ನೋಡಿ ಪ್ರಿಂಟ್ ತೆಗೆದುಕೊಂಡು ಅಸಲಿ ಆಧಾರ್ ಕಾರ್ಡ್ ನಂತೆ ಬಳಸಬಹುದು.

