ಆಪರೇಷನ್ ಕಮಲ ಆಮಿಷ ಪ್ರಕರಣ : ಸಿಎಂ ಬಿಎಸ್ ವೈ ವಿರುದ್ದ ತನಿಖೆಗೆ ಸಮ್ಮತಿ ನೀಡಿದ ಹೈಕೋರ್ಟ್ -Vishwanews24
ಆಪರೇಷನ್ ಕಮಲ ಆಮಿಷ ಪ್ರಕರಣ : ಸಿಎಂ ಬಿಎಸ್ ವೈ ವಿರುದ್ದ ತನಿಖೆಗೆ ಸಮ್ಮತಿ ನೀಡಿದ ಹೈಕೋರ್ಟ್ -Vishwanews24
ಬೆಂಗಳೂರು: ಆಪರೇಷನ್ ಕಮಲಕ್ಕಾಗಿ ಆಮಿಷ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ತನಿಖೆ ಕೈಗೊಳ್ಳಲು ಹೈಕೋರ್ಟ್ ಸಮ್ಮತಿ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವದುರ್ಗದಲ್ಲಿ ಬಿಎಸ್ ವೈ ವಿರುದ್ಧ ಪ್ರಕರಣ ದಾಖಲಾಗಿತ್ತು.
ಎಫ್ ಐ ಆರ್ ಗೆ ತಡೆಯಾಜ್ಞೆ ಕೋರಲಾಗಿತ್ತು. ಆದ್ರೀಗ ತಡೆಯಾಜ್ಞೆ ತೆರವುಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಹಿಂದೆ ಜೆಡಿಎಸ್ ನಿಂದ ಬಿಜೆಪಿ ಸೇರಲು ಯಡಿಯೂರಪ್ಪ ಆಮಿಷ ಒಡ್ಡಿದ್ದಾರೆ ಎಂದು ಶಾಸಕ ನಾಗನಗೌಡ ಪುತ್ರ ಶರಣಗೌಡ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ, ಶಿವನಗೌಡ ನಾಯಕ್, ಪ್ರೀತಮ್ ಗೌಡ, ಎಂ.ಬಿ.ಮರಮಕಲ್ ವಿರುದ್ಧ ದೂರು ದಾಖಲಾಗಿತ್ತು.
ಇದಾದ ಮೇಲೆ ಎಫ್ ಐ ಆರ್ ರದ್ದು ಮಾಡುವಂತೆ ಯಡಿಯೂರಪ್ಪ ಅರ್ಜಿ ಸಲ್ಲಿಸಿದ್ದು, ಸದ್ಯ ಆ ತಡೆಯಾಜ್ಞೆ ಯನ್ನು ಹೈಕೋರ್ಟ್ ತೆರವುಗೊಳಿಸಿದೆ. ನ್ಯಾಯಮೂರ್ತಿ ಜಾಮ್ ಮೈಕೆಲ್ ಕುನ್ಹಾ ಅವರ ಪೀಠ ತನಿಖೆಗೆ ಅಸ್ತು ಎಂದು ಆದೇಶ ಹೊರಡಿಸಿದೆ.
