ಆಪರೇಷನ್ ಗಂಗಾ ವಿಮಾನದ ಮೂಲಕ ತಾಯಿನಾಡಿಗೆ ಕೊನೆಯ ಬ್ಯಾಚಿನ 6,711 ಭಾರತೀಯ ವಿದ್ಯಾರ್ಥಿಗಳು – Vishwanews24

Featured, ರಾಷ್ಟ್ರ ನ್ಯೂಸ್

ಆಪರೇಷನ್ ಗಂಗಾ ವಿಮಾನದ ಮೂಲಕ ತಾಯಿನಾಡಿಗೆ ಕೊನೆಯ ಬ್ಯಾಚಿನ 6,711 ಭಾರತೀಯ ವಿದ್ಯಾರ್ಥಿಗಳು – Vishwanews24

ನವದೆಹಲಿ : ಯುದ್ಧಗ್ರಸ್ಥ ಉಕ್ರೇನ್‌ನಿಂದ ಭಾರತೀಯರನ್ನು ಕರೆತರುತ್ತಿದ್ದ ‘ಆಪರೇಷನ್ ಗಂಗಾ’ ವಿಮಾನದ ಕೊನೆಯ ಬ್ಯಾಚಿನ 6,711 ಭಾರತೀಯ ವಿದ್ಯಾರ್ಥಿಗಳೊಂದಿಗೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಹಂಗೇರಿಯಿಂದ ನವದೆಹಲಿಗೆ ವಾಪಸ್ಸಾಗಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಹರ್ದೀಪ್ ಸಿಂಗ್ ಪುರಿ, ಭಾರತದ ಯುವ ಜನರು, ಇದೀಗ ತಮ್ಮ ತಮ್ಮ ಸ್ಥಳಗಳಿಗೆ ತೆರಳಬಹುದಾಗಿದೆ. ತಮ್ಮ ಪೋಷಕರು ಮತ್ತು ಕುಟುಂಬಸ್ಥರನ್ನು ಸೇರಬಹುದಾಗಿದೆ. ಬುಡಾಪೆಸ್ಟ್‌ನ ನಮ್ಮ 6, 711 ವಿದ್ಯಾರ್ಥಿಗಳ ಕೊನೆಯ ಬ್ಯಾಚ್‌ನೊಂದಿಗೆ ದೆಹಲಿಯನ್ನು ತಲುಪಲು ಸಂತೋಷವಾಗಿದೆ ಎಂದರು.

ಇನ್ನು ಖಾರ್ಕಿವ್ ಮತ್ತು ಸುಮಿಯನ್ನು ಹೊರತುಪಡಿಸಿ ಉಕ್ರೇನ್‌ನ ಉಳಿದ ಪ್ರದೇಶಗಳಿಂದ ಬಹುತೇಕ ಎಲ್ಲ ಭಾರತೀಯರನ್ನು ಸ್ಥಳಾಂತರಿಸಲಾಗಿದ್ದು, ಈ ವರೆಗೆ 16,000 ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್‌ನಿಂದ ‘ಆಪರೇಷನ್ ಗಂಗಾ’ ಮೂಲಕ ಸ್ಥಳಾಂತರಿಸಲಾಗಿದೆ.

Leave a Reply