ಇಂದಿನಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಆರಂಭ  – Vishwanews24

Featured, ರಾಷ್ಟ್ರ ನ್ಯೂಸ್

ಇಂದಿನಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಆರಂಭ 

ಕೊರೊನಾ ಅವಧಿ ಬಳಿಕ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಭೇಟಿ ಕೊಡುವ ಭಕ್ತರ ಸಂಖ್ಯೆ ಕೊರೊನಾ ಪೂರ್ವ ಅವಧಿಗೆ ಸಮನಾಗುತ್ತಿದೆ. ಮಂಗಳವಾರ ಶಬರಿಮಲೆಯಲ್ಲಿ ಧಾರ್ಮಿಕ ವಿಧಿಗಳು ಆರಂಭಗೊಂಡಿದ್ದು ಬುಧವಾರ ದೇವಸ್ಥಾನದ ಬಾಗಿಲು ತೆರೆಯಲಾಗುತ್ತಿದೆ, ಭಕ್ತರಿಂದ ದರ್ಶನ ಆರಂಭವಾಗುತ್ತಿದೆ.

ಕರಾವಳಿಯಾದ್ಯಂತ ಕಾರ್ತಿಕ ಮಾಸದ ಸಂಕ್ರಮಣದಂದು (ಬುಧವಾರ) ಭಕ್ತರು ಮಾಲೆಯನ್ನು ಹಾಕುತ್ತಾರೆ. ಡಿ. 27ರಂದು ಮಂಡಲ ಪೂಜೆ ನಡೆಯಲಿದ್ದು ಬಳಿಕ ಇನ್ನೊಂದಾವರ್ತಿಯಲ್ಲಿ ಮಕರಸಂಕ್ರಮಣ ದರ್ಶನಕ್ಕೆ ತೆರೆಯಲಾಗುತ್ತದೆ. ಡಿಸೆಂಬರ್‌ ಮೊದಲೆರಡು ವಾರಗಳಲ್ಲಿಯೂ ವಿವಿಧೆಡೆ ಶಿಬಿರಗಳ ಮೂಲಕ ಮಾಲೆ ಧರಿಸುತ್ತಾರೆ. ಈ ಸಂದರ್ಭ ವ್ರತಧಾರಿ ಗಳಲ್ಲದೆ ಮನೆಯ ಇತರ ಸದಸ್ಯರೂ ಸಸ್ಯಾಹಾರವನ್ನು ಸ್ವೀಕರಿಸಿರುವುದರಿಂದ ಒಟ್ಟಾರೆ ತರಕಾರಿ, ಹಣ್ಣುಗಳ ಬಳಕೆ ಜಾಸ್ತಿಯಾಗುತ್ತಿದೆ.

✴️ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ಕಾಂತಾರ ನಟಿ ಸಪ್ತಮಿ ಗೌಡ..

ಚೆಂಗನ್ನೂರಿನಿಂದ ನೀಲಕಲ್‌ ವರೆಗೆ ಸ್ಪಾಟ್‌ ಬುಕಿಂಗ್‌ ಮಾಡುವ 12 ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. 15 ಆಸನಗಳಿಗಿಂತ ಕಡಿಮೆ ಇರುವ ವಾಹನಗಳಿಗೆ ಪಂಪೆ ವರೆಗೆ ಹೋಗಲು ಅವಕಾಶವಿದೆ. ಅದಕ್ಕಿಂತ ಹೆಚ್ಚಿನ ಆಸನ ಸಾಮರ್ಥ್ಯದ ವಾಹನಗಳಿಗೆ ನೀಲಕಲ್‌ ವರೆಗೆ ಮಾತ್ರ ಪ್ರವೇಶವಿದೆ. ಅಲ್ಲಿ ಭಕ್ತರು ಇಳಿದು ಸರಕಾರಿ ಬಸ್‌ಗಳಲ್ಲಿ ತೆರಳಬೇಕು. ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.

ಕೊರೊನಾ ಅವಧಿಯಲ್ಲಿ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಈ ಬಾರಿ ನಿತ್ಯ ಒಂದು ಲಕ್ಷ ಭಕ್ತರಿಗೆ ದರ್ಶನಾವಕಾಶ ಸಿಗುವ ಸಾಧ್ಯತೆ ಇದೆ.

ಕುಂದಾಪುರ : ಶಂಕರನಾರಾಯಣ ಮದರ್ ಥೆರೆಸಾ ಮೆಮೋರಿಯಲ್ ಶಾಲೆ..▶️ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಂದ ಆಜಾನ್‌ಗೆ ನೃತ್ಯ..

Leave a Reply