ಇಂದು ಈ ವರ್ಷದ ಅತೀ ದೊಡ್ಡ ಸೂಪರ್​​ ಮೂನ್​ ಗೋಚರ..Vishwanews24

Featured, ರಾಷ್ಟ್ರ ನ್ಯೂಸ್
ಚಂದಿರ ಭೂಮಿಗೆ ತೀರಾ ಹತ್ತಿರವಾಗಿ ಸುತ್ತು ಹಾಕುವ ಪ್ರಕ್ರಿಯೆಯನ್ನು ವಿಜ್ಞಾನಿಗಳು ಸೂಪರ್ ಮೂನ್​ ಎಂದು ಕರೆಲಾಗುತ್ತದೆ.  ಕಳೆದ ತಿಂಗಳ ಸೂಪರ್​ ಮೂನ್​​ಗಿಂತ ಸುಮಾರು 362 ಮೈಲಿಗಳಷ್ಟು ಹತ್ತಿರದಿಂದ ಚಂದಿರ ಭೂಮಿಯನ್ನ ಸುತ್ತು ಹಾಕಲಿದ್ದಾನೆ.  ಇಂದಷ್ಟೇ ಅಲ್ಲ ಮುಂದಿನ ಮಾರ್ಚ್​ನಲ್ಲೂ ಚಂದಿರ ಭೂಮಿಗೆ ಸಮೀಪದಲ್ಲಿ ತಿರುಗಲಿದ್ದಾನೆ.
ಇಂದಿನ ಈ ಚಂದಿರನನ್ನ ನಾಸಾ  ಸ್ನೋ ಮೂನ್​ ಹಾಗೂ ಹಂಗರ್​ ಮೂನ್​ ಎಂದು ಕರೆದಿದೆ.    ವಿಶೇಷವಾಗಿ ಈ ಅವಧಿಯಲ್ಲಿ ಚಳಿಗಾಲದ ಮಂಜು ಸುರಿಯುವ ಹಿನ್ನೆಲೆಯಲ್ಲಿ ಈ ಹುಣ್ಣಿಮೆಗೆ ಸ್ನೋ ಮೂನ್​ ಎಂದು ಹೆಸರಿಸಿದೆ. ಇವತ್ತಿನ ಈ ಕೌತುಕ ಹೆಚ್ಚು ಕಡಿಮೆ ಅಮೆರಿಕದಲ್ಲೇ ಜಾಸ್ತಿ ಕಾಣಿಸಿಕೊಳ್ಳಲಿದೆ.

ಏನಿದು ಸೂಪರ್ ಮೂನ್ ??

ಚಂದ್ರನು ತುಂಬಾ ಬೃಹತ್ ಆಕಾರದಲ್ಲಿ ಕಾಣಿಸಿಕೊಂಡಾಗ ಅದನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ. ಯಾಕೆಂದರೆ ಚಂದ್ರನು ಈ ಸಮಯದಲ್ಲಿ ತನ್ನ ಕಕ್ಷೆಯಲ್ಲಿ ಭೂಮಿಗೆ ತುಂಬಾ ಹತ್ತಿರವಾಗಿ ಇರುವನು. ಪ್ರತೀ ತಿಂಗಳಲ್ಲಿ ಒಂದು ಸಲ ಸೂಪರ್ ಮೂನ್ ಕಾಣಿಸಿಕೊಳ್ಳುವುದು. ಈ ಸಮಯದಲ್ಲಿ ಚಂದ್ರನು ಬೃಹತ್ ಆಕಾರ ಮತ್ತು ಪ್ರಕಾಶಮಾನವಾಗಿ ಕಾಣಿಸುವನು.