ಇಂದು ಪವರ್ ಸ್ಟಾರ್ 47ನೇ ಜನ್ಮದಿನ ; ಅಪ್ಪು ಸಮಾಧಿ ಬಳಿ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿದ ಕುಟುಂಬಸ್ಥರು -Vishwanews24

Featured, ರಾಜ್ಯ ನ್ಯೂಸ್

ಇಂದು ಪವರ್ ಸ್ಟಾರ್ 47ನೇ ಜನ್ಮದಿನ ; ಅಪ್ಪು ಸಮಾಧಿ ಬಳಿ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿದ ಕುಟುಂಬಸ್ಥರು -Vishwanews24

ಆಕಾಶ’ ನೋಡಿ ಅಪ್ಪುಗೆ ರಾಘಣ್ಣ ವಿಶ್..

ಬೆಂಗಳೂರು: ಇಂದು ಪವರ್ ಸ್ಟಾರ್, ಎಲ್ಲರ ಮೆಚ್ಚಿನ ಅಪ್ಪು. ನಗುವಿನ ಶ್ರೀಮಂತ ಡಾ. ಪುನೀತ್ ರಾಜ್‍ಕುಮಾರ್ 47ನೇ ಜನ್ಮದಿನ. ಇದೇ ಮೊದಲ ಬಾರಿಗೆ ಪುನೀತ್ ಇಲ್ಲದೇ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಇಂದೇ ಪುನೀತ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ತೆರೆಗಪ್ಪಳಿಸಿದೆ.

ಅಭಿಮಾನಿ ದೇವರುಗಳ ಜೈಕಾರ ಮುಗಿಲು ಮುಟ್ಟಿದ್ದು, ಸಂಭ್ರಮ ಮನೆ ಮಾಡಿದೆ. ಕುಟುಂಬಸ್ಥರು ಅಪ್ಪು ಸಮಾಧಿ ಬಳಿ ಕೇಕ್ ಕತ್ತರಿಸಿದ್ದಾರೆ. `ಆಕಾಶ’ ನೋಡಿ ಅಪ್ಪುಗೆ ರಾಘಣ್ಣ ವಿಶ್ ಮಾಡಿದ್ದಾರೆ. ಅಲ್ಲದೆ ಇವತ್ತು ನಿಮ್ಮಲ್ಲಿ ಕೋಟ್ಯಂತರ ಅಪ್ಪು ಕಾಣ್ತಿದ್ದಾನೆ. ಅಪ್ಪು ಆಸೆಯಂತೆ ಬರ್ತ್ ಡೇ ದಿನವೇ ಚಿತ್ರ ರಿಲೀಸ್ ಆಗುತ್ತಿದೆ ಎಂದು ಕಂಠೀರವ ಸ್ಟುಡಿಯೋ ಬಳಿ ಹೇಳಿದರು.

ನಿನ್ನೆ ರಾತ್ರಿ ಪುನೀತ್ ಸಮಾಧಿ ಸ್ಥಳಕ್ಕೆ ಆಗಿಮಿಸಿದ್ದ ಪುನೀತ್ ರಾಜ್‍ಕುಮಾರ್ ಕುಟುಂಬದವರು ಪುನೀತ್ ಸಮಾಧಿಯ ದರ್ಶನ ಪಡೆದು ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಅಪ್ಪುಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ್ದಾರೆ.

17-03-2022 : ಇಂದಿನ ದಿನ ಭವಿಷ್ಯ – Vishwanews24

 

Leave a Reply