ಇಂದು ಫ್ರಾನ್ಸ್ ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆ -Vishwanews24
ಇಂದು ಫ್ರಾನ್ಸ್ ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆ -Vishwanews24
ನವದೆಹಲಿ : ಫ್ರಾನ್ಸ್ ನಿಂದ ಭಾರತದ ಅಂಬಾಲ ವಾಯುನೆಲೆಗೆ ಬಂದಿಳಿದಿರುವ ಐದು ರಫೇಲ್ ಯುದ್ಧ ವಿಮಾನಗಳು ಇಂದು ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲಿದೆ.
ಅಂಬಾಲ ವಾಯುನೆಲೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಿರಿಯ ಸೇನಾ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಫ್ರಾನ್ಸ್ ನಿಂದ ಭಾರತದ ಅಂಬಾಲ ವಾಯುನೆಲೆಗೆ ಬಂದಿಳಿದಿರುವ ಐದು ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲಿದೆ.
ಫ್ರಾನ್ಸ್ ನಿಂದ 36 ರಫೆಲ್ ಯುದ್ಧ ವಿಮಾನ ಭಾರತ ಖರೀದಿಸಿದೆ. ಈಗಾಗಲೇ 5 ವಿಮಾನಗಳು ಭಾರತಕ್ಕೆ ಬಂದಿದೆ.
ನಾಲ್ಕು ವರ್ಷಗಳ ಹಿಂದೆ ಭಾರತವು ಫ್ರಾನ್ಸ್ನಿಂದ 36 ರಫೇಲ್ ಫೈಟರ್ಜೆಟ್ಗಳ ಖರೀದಿ ಸಂಬಂಧ 59000 ಕೋಟಿ ರೂ. ಮೊತ್ತದ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಜುಲೈ 29ರಂದು ಐದು ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಿದ್ದವು. ಶತ್ರು ರಾಷ್ಟ್ರಗಳ ವಿರುದ್ಧ ಬಲವರ್ಧನೆಗೆ ರಾಫೆಲ್ ಅವಶ್ಯಕವಾಗದೆ.
