ಇಂದು ಮಧ್ಯಾಹ್ನ ಹಾಲಾಡಿ ಶ್ರೀನಿವಾಸ್ ಶೆಟ್ಟಿಯಿಂದ ಮಹತ್ವದ ಪತ್ರಿಕಾಗೋಷ್ಠಿ : ಕುತೂಹಲದತ್ತ ಕುಂದಾಪುರ – Vishwanews24
ಇಂದು ಮಧ್ಯಾಹ್ನ ಹಾಲಾಡಿ ಶ್ರೀನಿವಾಸ್ ಶೆಟ್ಟಿಯಿಂದ ಮಹತ್ವದ ಪತ್ರಿಕಾಗೋಷ್ಠಿ :ಕುತೂಹಲದತ್ತ ಕುಂದಾಪುರ
ಹಾಲಾಡಿ ಸ್ಪರ್ಧೆಯ ಬಗ್ಗೆ ಖಚಿತತೆಯ ಸಾಧ್ಯತೆ
ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಕುಂದಾಪುರ ಬಿಜೆಪಿ ಕಚೇರಿಯಲ್ಲಿ ಮಹತ್ವದ ಪತ್ರಿಕಾಗೋಷ್ಠಿಯನ್ನು ಕರೆದಿದ್ದಾರೆ.

ಹಲವಾರು ರಾಜಕೀಯಗಳ ಬೆಳವಣಿಗೆಯ ಕುರಿತಾಗಿ ಈ ಪತ್ರಿಕಾಗೋಷ್ಠಿ ನಡೆಯಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರೇ ಸ್ಪರ್ಧಿಸುತ್ತಾರೋ ಅಥವಾ ಅವರ ಆಪ್ತ ಮೂಲಗಳಿಗೆ ಟಿಕೆಟ್ ನೀಡಲು ಒತ್ತಾಯಿಸುತ್ತಾರೋ ಎಂಬ ಹಲವಾರು ಪ್ರಶ್ನೆಗಳಿಗೆ ಇಂದು ತೆರೆ ಬೀಳುವ ಸಾಧ್ಯತೆಗಳಿವೆ.
ಉಡುಪಿ ಜಿಲ್ಲೆಯ ಆಕಾಂಕ್ಷಿ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರ ನಿರ್ಧಾರದ ಮೇಲೆ ಇರುವ ಪರಿಣಾಮವಾಗಿ ಇಂದಿನ ಪತ್ರಿಕಾಗೋಷ್ಠಿ ಅತ್ಯಂತ ಮಹತ್ವದ್ದಾಗಿದೆ.
ಇಂದು ಮಧ್ಯಾಹ್ನ ಕುಂದಾಪುರದ ಬಿಜೆಪಿ ಕಚೇರಿಯಲ್ಲಿ ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಮುಂದಿನ ಚುನಾವಣೆಯ ವಿಚಾರವಾಗಿ ಉತ್ತರಿಸಲೆದ್ದಾರೆಂಬ ಮಾಹಿತಿ ಹೊರಬಿದ್ದಿದೆ.
ಮಂಗಳೂರು: ಕೊರಗಜ್ಜ ಕೋಲ ಹಿನ್ನೆಲೆ – ಅಮಿತ್ ಶಾ ರೋಡ್ ಶೋ ರದ್ದು – Vishwanews24
