ಇಂದು19 ವಿಮಾನಗಳ ಮೂಲಕ ಉಕ್ರೇನ್ ನಿಂದ ಆಗಮಿಸಲಿರುವ 3,726 ಭಾರತೀಯರು – Vishwanews24
ಇಂದು19 ವಿಮಾನಗಳ ಮೂಲಕ ಉಕ್ರೇನ್ ನಿಂದ ಆಗಮಿಸಲಿರುವ 3,726 ಭಾರತೀಯರು – Vishwanews24
ನವದೆಹಲಿ: ರಷ್ಯಾ ಉಕ್ರೇನ್ ಮೇಲೆ ಯುದ್ಧ ಮುಂದುವರೆಸಿರುವಂತ ಸಂದರ್ಭದಲ್ಲಿಯೇ, ಉಕ್ರೇನ್ ನಲ್ಲಿ ಸಿಲುಕಿರುವಂತ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವಂತ ಕೆಲಸದಲ್ಲಿ ವಿದೇಶಾಂಗ ಸಚಿವಾಲಯ ನಿರತವಾಗಿದೆ. ಇಂದು ತನ್ನ ಆಪರೇಷನ್ ಗಂಗಾ ಕಾರ್ಯಾಚರಣೆ ಮುಂದುವರೆಸಿದ್ದು, ಉಕ್ರೇನ್ ನಿಂದ ಗುರುವಾರದ ಇಂದು, 19 ವಿಮಾನಗಳ ಮೂಲಕ 3,726 ಭಾರತೀಯರನ್ನು ಮರಳಿ ಕರೆತರಲಾಗುತ್ತಿದೆ ಎಂಬುದಾಗಿ ವಿಮಾನಯಾನ ಸಚಿವರು ಮಾಹಿತಿ ನೀಡಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವಂತ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಉಕ್ರೇನ್ ನ ನೆರೆಯ ದೇಶಗಳಿಂದ 3.726 ಭಾರತೀಯರನ್ನು ಭಾರತಕ್ಕೆ ಕರೆತರಲು ಐಎಎಫ್ ಮತ್ತು ಭಾರತೀಯ ವಿಮಾನಯಾನ ಸಂಸ್ಥೆಗಳ 19 ವಿಮಾನಗಳು ಇಂದು ಆಪರೇಷನ್ ಗಂಗಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ತಿಳಿಸಿದ್ದಾರೆ.
With all hands on deck & the direction of PM @narendramodi Ji, we will get 3726 of our people back home today. Jai Hind! #OperationGanga https://t.co/83Rg0c9lAk
— Jyotiraditya M. Scindia (@JM_Scindia) March 3, 2022
ಆಪರೇಶನ್ ಗಂಗಾ ಅಡಿಯಲ್ಲಿ, ಐಎಎಫ್, ಏರ್ ಇಂಡಿಯಾ ಮತ್ತು ಇಂಡಿಗೊದ ಎಂಟು ವಿಮಾನಗಳು ರೊಮೇನಿಯನ್ ರಾಜಧಾನಿ ಬುಚಾರೆಸ್ಟ್ ನಿಂದ ಭಾರತಕ್ಕೆ ಗುರುವಾರ ಕಾರ್ಯನಿರ್ವಹಿಸಲಿವೆ ಎಂದು ಅವರು ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
ಉಕ್ರೇನ್ ನ ಬಂಕರ್ ನಲ್ಲೇ ಬಾಕಿಯಾದ ಉಜಿರೆ ವಿದ್ಯಾರ್ಥಿನಿ – Vishwanews24
