ಇದೇ ವಾರದಲ್ಲಿ SSLC ಪರೀಕ್ಷೆ ಫಲಿತಾಂಶ ಪ್ರಕಟ : ಫಲಿತಾಂಶ ವೀಕ್ಷಿಸಲು ಈ ಕ್ರಮ ಅನುಸರಿಸಿ – Vishwanews24

Featured, ರಾಜ್ಯ ನ್ಯೂಸ್

ಇದೇ ವಾರದಲ್ಲಿ SSLC ಪರೀಕ್ಷೆ ಫಲಿತಾಂಶ ಪ್ರಕಟ : ಫಲಿತಾಂಶ ವೀಕ್ಷಿಸಲು ಈ ಕ್ರಮ ಅನುಸರಿಸಿ

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ  ತನ್ನ 2022 ರ ಪರೀಕ್ಷೆಗಳ ಫಲಿತಾಂಶಗಳನ್ನು ಈ ವಾರ ಪ್ರಕಟಿಸಲಿದೆ. ಪರೀಕ್ಷಾ ಫಲಿತಾಂಶಗಳ ದಿನಾಂಕಗಳನ್ನು ಮಂಡಳಿಯು ಘೋಷಿಸಿಲ್ಲ ಆದರೆ ಅದು ಮುಂದಿನ ಒಂದೆರಡು ದಿನಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡ ನಂತ್ರ, ವಿದ್ಯಾರ್ಥಿಗಳು ತಮ್ಮ ಫಲಿತಾಂಶ ವೀಕ್ಷಣೆಯ ಬಗ್ಗೆ ಕೆ ಎಸ್ ಇ ಇ ಬಿ ಬೋರ್ಡ್ ಅಧಿಕೃತ ಮಾಹಿತಿ ತಿಳಿಸಲಿದೆ.

ವರದಿಗಳ ಪ್ರಕಾರ, ಕರ್ನಾಟಕ ಎಸ್‌ಎಸ್‌ಎಲ್ಸಿ ಫಲಿತಾಂಶ 2022 ಮೇ 14 ರೊಳಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಹೀಗೆ ಪ್ರಕಟಗೊಂಡಂತ ಫಲಿತಾಂಶವನ್ನು ಅಧಿಕೃತ ವೆಬ್ಸೈಟ್ karresults.nic.in ಮತ್ತು sslc.karnataka.gov.in ನಲ್ಲಿ ವೀಕ್ಷಿಸಬಹುದಾಗಿದೆ.

ಫಲಿತಾಂಶ ವೀಕ್ಷಿಸಲು ಈ ಕ್ರಮ ಅನುಸರಿಸಿ

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಫಲಿತಾಂಶ ಘೋಷಣೆಯಾದ ನಂತ್ರ,http://karresults.nic.in ಮತ್ತು http://sslc.karnataka.gov.in  ಜಾಲತಾಣಕ್ಕೆ ಭೇಟಿ ನೀಡಬೇಕು.

ಈ ಪುಟದಲ್ಲಿ ತೋರಿಸುವಂತ ಎಸ್ ಎಸ್ ಎಲ್ ಸಿ ಫಲಿತಾಂಶ ವೀಕ್ಷಣೆಯ ಲಿಂಕ್ ಕ್ಲಿಕ್ ಮಾಡಬೇಕು.

ಆಗ ತೆರೆದುಕೊಳ್ಳುವಂತ ಮತ್ತೊಂದು ಪುಟದಲ್ಲಿ ನಿಮ್ಮ ನೋಂದಣಿ ಸಂಖ್ಯೆ ನಮೂದಿಸಿದಬೇಕು.

ಈ ಬಳಿಕ, ಫಲಿತಾಂಶ ವೀಕ್ಷಣೆಯ ಬಳಿಯಲ್ಲಿ ದ್ರೇ.. ನಿಮ್ಮ ಎಸ್ ಎಸ್ ಎಲ್ ಸಿ ಫಲಿತಾಂಶ ಸಿಗಲಿದೆ

 

Leave a Reply