ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರಕ್ಕೆ ಎರಡು ಧ್ವಜ, ಎರಡು ಸಂವಿಧಾನಗಳಿರುವುದಿಲ್ಲ : ಅಮಿತ್ ಶಾ -Vishwanews24
ನವದೆಹಲಿ: ಇನ್ನು ಮುಂದೆ ಎರಡು ಧ್ವಜ, ಎರಡು ಸಂವಿಧಾನಗಳಿರುವುದಿಲ್ಲ ಎನ್ನುವುದನ್ನು 370ನೇ ವಿಧಿ ರದ್ದತಿ ಉಪಕ್ರಮವು ಖಾತರಿಪಡಿಸುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
370ನೇ ವಿಧಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿತ್ತು.ಅದರೊಡನೆ ಇತರೆ ಹಕ್ಕುಗಳನ್ನು, ತನ್ನದೇ ಆದ ಧ್ವಜ,ವನ್ನು ಹೊಂದಲು ಸಹ ಅವಕಾಶ ಕಲ್ಪಿಸಿತ್ತು.
ಕಾಶ್ಮೀರ ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿದೆ ಹಾಗಾಗಿ ಕೇಂದ್ರ ಸರ್ಕಾರದ ಈ ನಿರ್ಧಾರವು ಕಾಶ್ಮೀರದಲ್ಲಿ ಎರಡನೇ ಧ್ವಜ, ಎರಡನೇ ಸಂವಿಧಾನ ಇರುವುದಕ್ಕೆ ಅವಕಾಶ ನೀಡುವುದಿಲ್ಲಎಂದು ಖಚಿತಪಡಿಸುತ್ತದೆ ಎಂದು ರಾಜ್ಯಸಭೆಯಲ್ಲಿ ಐತಿಹಾಸಿಕ ಮಸೂದೆಗೆ ಅಂಗೀಕಾರ ಪಡೆದ ನಂತರ ಶಾ ಅವರು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
“ಈ ನಿರ್ಧಾರವು ಏಕೀಕೃತ ಭಾರತಕ್ಕಾಗಿ ಸರ್ವೋಚ್ಚ ತ್ಯಾಗ ಮಾಡಿದ ಎಲ್ಲ ದೇಶಭಕ್ತರಿಗೆ ಸಲ್ಲಿಸಿದ ಗೌರವವಾಗಿದೆ. ಇಡೀ ರಾಷ್ಟ್ರಕ್ಕೆನಾನು ಅಭಿನಂದನೆ ಸಲ್ಲಿಸುತ್ತೇನೆ.ಇಂದು, ಮೋದಿ ಸರ್ಕಾರವು ದೀರ್ಘಕಾಲದ ದ ಐತಿಹಾಸಿಕ ತಪ್ಪನ್ನು ಸರಿಪಡಿಸಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
Kashmir has always been an integral part of India but this decision will ensure that there will no more be दो निशान-दो सविंधान in J&K.
This decision is a tribute to all the patriots who made the supreme sacrifice for a united India.
Congratulations to the entire nation.
— Amit Shah (@AmitShah) August 5, 2019
