ಇನ್ಸ್ಟಾಗ್ರಾಂ ಪರಿಚಯ : ಯುವಕನ ಹುಡುಕಿಕೊಂಡು ಸುರತ್ಕಲ್ ಗೆ ಬಂದ ಎಂಬಿಬಿಎಸ್ ವಿಧ್ಯಾರ್ಥಿನಿ :- ಪ್ರಕರಣಕ್ಕೆ ಬಿಗ್ ಟ್ವಿಸ್ಟ್ -Vishwanews24

Featured, ದಕ್ಷಿಣ ಕನ್ನಡ

ಇನ್ಸ್ಟಾಗ್ರಾಂ ಪರಿಚಯ : ಯುವಕನ ಹುಡುಕಿಕೊಂಡು ಚೆನ್ನೈ ನಿಂದ ಸುರತ್ಕಲ್ ಗೆ ಬಂದ ಎಂಬಿಬಿಎಸ್ ವಿಧ್ಯಾರ್ಥಿನಿ..

ಪ್ರಕರಣಕ್ಕೆ ಬಿಗ್ ಟ್ವಿಸ್ಟ್..

ಸಂಸ್ಥೆಯ ಎಂಜಿನಿಯರ್‌ ವಿದ್ಯಾರ್ಥಿಗೆ ಯುವತಿಯ ಪರಿಚಯವಿಲ್ಲ..

ಸುರತ್ಕಲ್‌ : ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವಕನನ್ನು ಹುಡುಕಿಕೊಂಡು ಎಂಬಿಬಿಎಸ್ ವಿಧ್ಯಾರ್ಥಿನಿಯೊಬ್ಬಳು ಮಂಗಳೂರಿಗೆ ಆಗಮಿಸಿದ ಘಟನೆ ನಡೆದಿದೆ. ರಾಜಸ್ಥಾನ ಮೂಲದ ಪ್ರಸ್ತುತ ಚೆನ್ನೈನಲ್ಲಿ ಎಂಬಿಬಿಎಸ್‌ ದ್ವಿತೀಯ ವರ್ಷ ಓದುತ್ತಿರುವ ವಿದ್ಯಾರ್ಥಿನಿ ರೇಶು ಎಂಬಾಕೆ ಓಡಿ ಬಂದ ವಿಧ್ಯಾರ್ಥಿನಿ.

ಯುವಕನ ಹುಡುಕಿಕೊಂಡು ಚೆನ್ನೈ ನಿಂದ ರೇಶು ಸುರತ್ಕಲ್ ಗೆ ತಲುಪಿದ್ದಾಳೆ, ಇಲ್ಲಿಗೆ ಬರುವಾಗ ಬ್ಯಾಗ್‌, ಮೊಬೈಲ್‌ ಕಳವಾಗಿದೆ. ಇದರಿಂದ ಆಕೆಗೆ ದಿಕ್ಕು ತೋಚದಂತೆ ಆಗಿ ಸುರತ್ಕಲ್‌ನ ಕಾಂತೇರಿ ದೈವಸ್ಥಾನದ ಬಳಿ ನಿಂತು ತನ್ನಲ್ಲಿದ್ದ ಚಿನ್ನ ಮಾರಾಟ ಮಾಡಲು ಯೋಚಿಸಿ ಅಂಗಡಿ ಬಗ್ಗೆ ಸ್ಥಳೀಯರಲ್ಲಿ ವಿಚಾರಿಸಿದ್ದಾಳೆ.

ಮಂಗಳೂರು: ಚರ್ಮಗಂಟು ರೋಗ :- ನ. 30 ರವರೆಗೆ ಜಾನುವಾರುಗಳ ಸಾಗಾಟಕ್ಕೆ ತಾತ್ಕಾಲಿಕ ನಿಷೇಧ : ಜಿಲ್ಲಾಧಿಕಾರಿ – Vishwanews24

ಯುವತಿಯ ಬಗ್ಗೆ ಸಂಶಯ ಮೂಡಿದಾಗ ಸ್ಥಳೀಯ ಆಪದ್ಭಾಂಧವ ಸಮಾಜ ಸೇವಾ ಸಂಸ್ಥೆಯ ಉಮೇಶ್‌ ದೇವಾಡಿಗ ಇಡ್ಯಾ ಹಾಗೂ ಸ್ಥಳೀಯರಾದ ಕೃಷ್ಣಪ್ಪ,ಕೇಶವ ,ನಾಗೇಶ್‌ ಕಾನಾ ಅವರು ವಿಚಾರಿಸಿದಾಗ ದಾರಿ ತಪ್ಪಿ ಬಂದಿರುವ ಶಂಕೆ ವ್ಯಕ್ತವಾಗಿ ಸುರತ್ಕಲ್‌ ಪೊಲೀಸ್‌ ಠಾಣೆಗೆ ಕರೆತಂದು ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರಿಸಲು ನೆರವಾದರು.

ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ಸ್ಥಳೀಯ ಸಂಸ್ಥೆಯ ಎಂಜಿನಿಯರ್‌ ವಿದ್ಯಾರ್ಥಿಗೆ ಪರಿಚಯವಿಲ್ಲ ಎಂಬುದು ತಿಳಿದು ಬಂತು.ಈ ಹಿಂದೆಯೂ ಇದೇ ರೀತಿ ಮನೆ ಬಿಟ್ಟು ಹೋದ ಬಗ್ಗೆ ಮಾಹಿತಿ ತಿಳಿದು ಬಂದಿದೆ.

BREAKING 🔥ಸುರತ್ಕಲ್ ಟೋಲ್‍ಗೇಟ್ ವಿವಾದ.. ಹೋರಾಟಗಾರರ ಮೇಲೆ FIR ದಾಖಲು – Vishwanews24

Leave a Reply