ಇವತ್ತಿನಿಂದ ಬಿಜೆಪಿ ಸರ್ಕಾರದ ಕೊನೆಯ ಕ್ಷಣ ಆರಂಭ : ಡಿ.ಕೆ. ಶಿ – VIshwanews24
ಇವತ್ತಿನಿಂದ ಬಿಜೆಪಿ ಸರ್ಕಾರದ ಕೊನೆಯ ಕ್ಷಣ ಆರಂಭ : ಡಿ.ಕೆ. ಶಿ
ಬೆಂಗಳೂರು : ನಾವು ಮೂರು ತಿಂಗಳು ಮೊದಲೇ ಚುನಾವಣೆಗೆ ರೆಡಿ ಇದ್ದೇವೆ, ಅವರು ಹೇಗಾದರೂ ಮಾಡಿಕೊಳ್ಳಲಿ, ಇವತ್ತಿನಿಂದ ಸರ್ಕಾರದ ಕೊನೆಯ ಕ್ಷಣ ಆರಂಭವಾಗಿದೆ. ಬಿಜೆಪಿಯವರು 60-65 ಸೀಟಿಗೆ ಬಂದು ನಿಲ್ತಾರೆ. ನಾವು ನಿಚ್ಚಳವಾದ ಬಹುಮತ ಪಡೆತ್ತೇವೆ. ಎಷ್ಟು ಬೇಗ ಚುನಾವಣೆ ಆಗತ್ತೆ ಅಷ್ಟು ಕಾಂಗ್ರೆಸ್‌ಗೆ ಒಳ್ಳೆದು ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಇಂದು ವಿಧಾನಸಭಾ ಚುನಾವಣೆ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಸರ್ಕಾರ ಅಧಿಕಾರವನ್ನು ಮಿಷನರಿಯನ್ನು ಎಷ್ಟು ದುರ್ಬಳಕೆ ಮಾಡಿಕೊಳ್ಳಬೇಕೋ ಅಷ್ಟು ಮಾಡಿದ್ದಾರೆ. ಮೀಸಲಾತಿ ವಿಚಾರದಲ್ಲಿ ಯಾರಿಗೂ ಸಮಾಧಾನ ಇಲ್ಲ. ಕೋರ್ಟ್‌ಗೆ ಹೋದರೆ ಯಾವುದೂ ನಿಲ್ಲುವುದಿಲ್ಲ. ಅವರು ಮಾಡಿದ ತಪ್ಪನ್ನು ನಾವು ಸರಿ ಮಾಡ್ತೇವೆ. ಮನೆ ಆಸ್ತಿನ ಹಂಚಿಕೊಂಡಂಗೆ ಇವರು ಕೊನೆ ಕ್ಷಣದಲ್ಲಿ ಹಂಚಿಕೊಳ್ಳಲು ಹೊರಟಿದ್ದಾರೆ ಅಂತ ಲೇವಡಿ ಮಾಡಿದ್ದಾರೆ.
ಕಾಪು : ತಾಲೂಕು ವ್ಯಾಪ್ತಿಯಲ್ಲಿ ಸ್ಮಶಾನದ ಜಮೀನಿಗೆ ಅರ್ಜಿ ಸಲ್ಲಿಸಿ – Vishwanews24
