ಇಸ್ರೊ ಮತ್ತೊಂದು ಸಾಧನೆ : 2020ರ ಮೊದಲ ಉಪಗ್ರಹ’ ಜಿಸ್ಯಾಟ್-30 ಯಶಸ್ವಿ ಉಡಾವಣೆ -Vishwanews24
ಹೊಸದಿಲ್ಲಿ,: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ವದೇಶಿ ತಂತ್ರಜ್ಞಾನದ ಮೂಲಕ ನಿರ್ಮಿಸಿರುವ ಸುಧಾರಿತ, ಆಧುನಿಕ ಸಂವಹನ ಉಪಗ್ರಹ ‘ಜಿಸ್ಯಾಟ್-30’ ಫ್ರಾನ್ಸ್ ನ ಗಯಾನಾ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ನಸುಕಿನ ಜಾವ ಯಶಸ್ವಿಯಾಗಿ ಉಡಾವಣೆಯಾಗಿದೆ.
ದಕ್ಷಿಣ ಅಮೆರಿಕಾದ ಈಶಾನ್ಯ ಕರಾವಳಿಯಲ್ಲಿರುವ ಕೌರೌನಲ್ಲಿರುವ ಎರೇನ್ ಉಡ್ಡಯನ ಕಾಂಪ್ಲೆಕ್ಸ್ ನಿಂದ ಭಾರತೀಯ ಕಾಲಮಾನದ ಪ್ರಕಾರ, ಇಂದು ನಸುಕಿನ ಜಾವ 2.35ರ ವೇಳೆಗೆ ‘ಎರೇನ್ 5’ ಎಂಬ ರಾಕೆಟ್ ವಾಹಕದ ಮೂಲಕ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ.
ಜಿಸ್ಯಾಟ್ ಒಟ್ಟು 3357 ಕೆ.ಜಿ ತೂಕ ಹೊಂದಿದ್ದು, ವಿಸ್ಕ್ರತ ವ್ಯಾಪ್ತಿಯೊಂದಿಗೆ ಇನ್ಸಾಟ್-4ಎ ಉಪಗ್ರಹದ ಸೇವೆಗಳನ್ನು ಒದಗಿಸಲಿದೆ. ಕೆಯು ಬ್ಯಾಂಡ್ ಮತ್ತು ವಿಸ್ತರಿತ ವ್ಯಾಪ್ತಿಯ ಸಿ-ಬ್ಯಾಂಡ್ ಸೇವೆಗಳನ್ನು ನೀಡಲಿದ್ದು, ಭಾರತೀಯ ಭೂ ಪ್ರದೇಶ, ದ್ವೀಪ ಪ್ರದೇಶ, ಕೊಲ್ಲಿ ರಾಷ್ಟ್ರಗಳು ಸೇರಿದಂತೆ ಬಹುತೇಕ ಏಷ್ಯನ್ ದೇಶಗಳು ಹಾಗೂ ಆಸ್ಟ್ರೇಲಿಯಾದ ವ್ಯಾಪ್ತಿಯಲ್ಲಿಯೂ ಸೇವೆ ನೀಡಲು ಶಕ್ತವಾಗಿದೆ.
ಸುಮಾರು 15 ವರ್ಷಗಳ ಜೀವಿತಾವಧಿಯನ್ನು ಹೊಂದಿರುವ ಜಿಸ್ಯಾಟ್-30 ಇಸ್ರೋದ ವಿಸ್ತರಿತ ಐ-3ಕೆ ಬಸ್ ಸಂರಚನೆಯನ್ನು ಅಳವಡಿಸಿಕೊಂಡಿದೆ. ಜಿಸ್ಯಾಟ್-30 ಕಾರ್ಯ ಪ್ರಾರಂಭಿಸಿದ ನಂತರ, ಗ್ರಮೀಣ ಪ್ರದೇಶಗಳ ಡಿಜಿಟಲ್ ಅಂತರವನ್ನು ಕಿರಿದುಗೊಳಿಸಲು ಬಾಹ್ಯಾಕಾಶ ಅನ್ವಯಿಕೆಗಳನ್ನು ಬಳಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
India's communication satellite #GSAT30 was successfully launched into a Geosynchronous Transfer Orbit by #Ariane5 #VA251.
Thanks for your support !!!
For details please visit: https://t.co/FveT3dGuo6
Image Courtesy: Arianespace pic.twitter.com/67csn0zZq7
— ISRO (@isro) January 16, 2020
