ಈರುಳ್ಳಿ ಬೆಲೆ ಏರಿಕೆ ಮೋದಿ ಸರಕಾರದ ದೊಡ್ಡ ವೈಫಲ್ಯ, ಕೂಡಲೇ ಬೆಲೆ ನಿಯಂತ್ರಣಕ್ಕಾಗಿ ಕ್ರಮ ತೆಗೆದುಕೊಳ್ಳಬೇಕು : ದಿನೇಶ್ ಗುಂಡುರಾವ್ -Vishwanews24
ಬೆಂಗಳೂರು: ಈರುಳ್ಳಿ ಬೆಲೆ ಏರಿಕೆ ಮೋದಿ ಸರಕಾರದ ದೊಡ್ಡ ವೈಫಲ್ಯ. ಕೂಡಲೇ ಬೆಲೆ ನಿಯಂತ್ರಣಕ್ಕಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ದಿನೇಶ್ ಗುಂಡುರಾವ್ ಹೇಳಿದ್ದಾರೆ.
ಕೇಂದ್ರದ ಆರ್ಥಿಕ ನೀತಿಯಿಂದಾಗಿ ಈ ರೀತಿಯಾಗಿ ಈರುಳ್ಳಿ ಬೆಲೆ ಏರಿಕೆಯಾಗುತ್ತಿದ್ದು, ಈಗ 150ರ ಗಡಿ ದಾಟುವಲ್ಲಿದೆ. ಹೋಗಿರುವಾಗಲೂ ಮೋದಿ ಸರಕಾರ ಏಕಾಗಿ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಬೆಲೆ ಏರಿಕೆಯಿಂದಾಗಿ ಜನರ ಬದುಕು ನರಕವಾಗಿದ್ದು ಸಂಸತ್ತಿನಲ್ಲಿ ಆರ್ಥಿಕ ಸ್ಥಿತಿಯ ಕುರಿತು ಚರ್ಚೆ ನಡೆಸಬೇಕು ಅಗತ್ಯವಾದ ಸಲಹೆಗಳನ್ನು ಪಡೆಯಬೇಕು ಎಂದು ಒತ್ತಾಯಿಸಿದರು.
