ಈರುಳ್ಳಿ ಸಿಪ್ಪೆ ಎಸೆಯುವ ಮೊದಲು ಅದರ ಉಪಯೋಗ ತಿಳಿದುಕೊಳ್ಳಿ – Vishwanews24

Featured, ವಿಶೇಷ ಲೇಖನಗಳು

ಅಡುಗೆ ಮನೆಯಲ್ಲಿ ಬಳಸಿ ಬಿಸಾಡುವ ಈರುಳ್ಳಿ ಸಿಪ್ಪೆಯಿಂದ ಎಷ್ಟು ಉಪಯೋಗವಿದೆ ಎಂದು ಗೊತ್ತಾದರೆ ನೀವು ಅದನ್ನು ಕಎಸೆಯುವ ಮುನ್ನ ಯೋಚಿಸುವಿರಿ.

ಈರುಳ್ಳಿ ಆಂಟಿಆಕ್ಸಿಡೆಂಟ್ ಗುಣ ಹೊಂದಿದೆ. ಟೀ ಅಥವಾ ಸೂಪ್ ಮಾಡುವ ವೇಳೆ ಈರುಳ್ಳಿ ಸಿಪ್ಪೆಯನ್ನು ಹಾಕಿ ಕುದಿಸಬೇಕು. ಆಂಟಿಆಕ್ಸಿಡೆಂಟ್ ಚರ್ಮ ಹಾಗೂ ದೇಹದ ಒಳ ಭಾಗವನ್ನು ಸ್ವಚ್ಛಗೊಳಿಸುತ್ತದೆ. ರೋಗ-ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಈರುಳ್ಳಿ ಸಿಪ್ಪೆ ಗಂಟಲು ನೋವನ್ನು ಗುಣಪಡಿಸುವ ಶಕ್ತಿ ಹೊಂದಿದೆ. ನೀರಿಗೆ ಈರುಳ್ಳಿ ಸಿಪ್ಪೆಯನ್ನು ಹಾಕಿ ಕುದಿಸಿ. ಈ ನೀರಿನಲ್ಲಿ ನಂತ್ರ ಬಾಯಿ ಮುಕ್ಕಳಿಸಿ. ಇದ್ರಿಂದ ಗಂಟಲು ನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.

ಈರುಳ್ಳಿ ಸಿಪ್ಪೆ ಮುಖದ ಕಲೆಯನ್ನು ಹೋಗಲಾಡಿಸುತ್ತದೆ. ಸ್ವಲ್ಪ ರಸವಿರುವ ಈರುಳ್ಳಿ ಸಿಪ್ಪೆಯನ್ನು ತೆಗೆದು ಅದಕ್ಕೆ ಸ್ವಲ್ಪ ಅರಿಶಿನವನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ನಂತ್ರ ಒಣಗಿದ ಕೈನಲ್ಲಿ ನಿಧಾನವಾಗಿ ಮಸಾಜ್ ಮಾಡಿ. ವಾರಕ್ಕೊಮ್ಮೆ ಈ ಮಸಾಜ್ ಮಾಡಿದ್ರೆ ಮುಖದ ಕಲೆ ದೂರವಾಗಲಿದೆ.

ಒಡೆದ ಹಿಮ್ಮಡಿಗೆ :
ಈ ಚಳಿಗಾಲದಲ್ಲಿ ಕಾಲಿನ ಹಿಮ್ಮಡಿ ಒಡೆತ ಸಾಮಾನ್ಯ ಸಮಸ್ಯೆ. ಈ ಸಮಸ್ಯೆಗೆ ಈರುಳ್ಳಿ ಸಿಪ್ಪೆಯನ್ನು ಬಳಸಬಹುದು. ಈರುಳ್ಳಿ ಸಿಪ್ಪೆಯನ್ನು 10 ರಿಂದ 20 ನಿಮಿಷ ನೀರಿನಲ್ಲಿ ಕುದಿಸಿ  ಆ ನೀರಿನಲ್ಲಿ ಕಾಲು ಅದ್ದಿಟ್ಟರೆ ಹಿಮ್ಮಡಿ ಮೃದುವಾಗುವುದು.

ಕಂಪೋಸ್ಟ್ ಗೆ :
ನಿಮ್ಮ ಮನೆಯಲ್ಲಿ ಸಸಿಯಿದ್ದರೆ ಅದಕ್ಕೆ ಈರುಳ್ಳಿ ಸೊಪ್ಪನ್ನು ಕಂಪೋಸ್ಟ್ ಮಾಡಿ ಹಾಕಿ. ಇದು ಗಿಡಗಳಿಗೆ ಬೆಸ್ಟ್ ಗೊಬ್ಬರವಾಗುತ್ತದೆ.