ಈ ಬಾರಿ ಗಣೇಶ ಮೂರ್ತಿಯ ಜೊತೆ ಸಾವರ್ಕರ್‌ ಫೋಟೋ : ಹಿಂದೂ ಸಂಘಟನೆಗಳಿಂದ ಮೆಗಾ ಪ್ಲ್ಯಾನ್ – Vishwanews24

Featured, ರಾಜ್ಯ ನ್ಯೂಸ್

ಈ ಬಾರಿ ಗಣೇಶ ಮೂರ್ತಿಯ ಜೊತೆ ಸಾವರ್ಕರ್‌ ಫೋಟೋ : ಹಿಂದೂ ಸಂಘಟನೆಗಳಿಂದ

ಮೆಗಾ ಪ್ಲ್ಯಾನ್

ಬೆಂಗಳೂರು: ರಾಜ್ಯದಲ್ಲಿ ಸಾವರ್ಕರ್‌ ವರ್ಸಸ್ ಟಿಪ್ಪು ವಿವಾದ ಭುಗಿಲೆದ್ದಿದೆ. ಈಗಾಗಲೇ ರಾಜ್ಯದಲ್ಲಿ ವಿವಾದ ಹಿಂಸಾಚಾರಕ್ಕೆ ತಿರುಗಿದೆ. ಇದೀಗ ಹಿಂದೂ ಪರ ಸಂಘಟನೆಗಳು ವಿಭಿನ್ನವಾಗಿ ಅಭಿಯಾನ ಶುರು ಮಾಡಿದ್ದಾರೆ. ಸಾವರ್ಕರ್‌ ವಿರೋಧಿಗಳಿಗೆ ಟಕ್ಕರ್‌ ಕೊಡುವ ಸಲುವಾಗಿ ಮೆಗಾ ಪ್ಲಾನ್‌ ಮಾಡಿದ್ದಾರೆ.

Kannada literature, ಹಿಂದೂ ಚಿಂತನೆಯ ಜಲಚಿಹ್ನೆ ವೀರ ಸಾವರ್ಕರ್‌ - vinayak damodar  savarkar - Vijaya Karnataka

ಮಲೆನಾಡು ಶಿವಮೊಗ್ಗದಲ್ಲಿ ಸಾವರ್ಕರ್ ಭಾವಚಿತ್ರ ತೆರವು ವಿಚಾರವಾಗಿ ವಿವಾದ ಶುರುವಾಗಿ, ಎಲ್ಲೆಡೆ ಹಬ್ಬುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಸಾವರ್ಕರ್ ವಿರೋಧಿಗಳಿಗೆ ಟಕ್ಕರ್ ಕೊಡಲು ಹಿಂದೂ ಸಂಘಟನೆಗಳು ಮುಂದಾಗಿದ್ದು, ಈ ಬಾರಿಯ ಗಣೇಶೋತ್ಸವದ ಮೂಲಕವೇ ಸಾವರ್ಕರ್‌ ಗೆ ಇಡೀ ರಾಜ್ಯಾದ್ಯಂತ ಗೌರವ ಸಲ್ಲಿಸಲು ಸಿದ್ಧತೆ ನಡೆಸಿವೆ.

ಈ ಬಾರಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ...

ಇನ್ನು ಈ ಬಗ್ಗೆ ಮಾತನಾಡಿರುವ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು, ಈ ಬಾರಿ ಇಡೀ ರಾಜ್ಯದ ಎಲ್ಲಾ ಗಣೇಶ ಮೂರ್ತಿಗಳ ಜೊತೆಗೆ ಸಾವರ್ಕರ್ ಫೋಟೋ ಇಡಲಿದ್ದೇವೆ. ಇದಕ್ಕೆ ಪ್ರತಿಯೊಬ್ಬ ಹಿಂದೂ ಕಾರ್ಯಕರ್ತನೂ ಇದಕ್ಕೆ ಬದ್ಧನಾಗಿರಲಿದ್ದು. ಯಾರು ಬಂದು ಫೋಟೋ ತೆಗೆಸುತ್ತಾರೋ ನೋಡೋಣ ಎಂದು ಸವಾಲು ಹಾಕಿದ್ದಾರೆ.

ನಿಗದಿತ ಸಮಯಕ್ಕೆ ಶಾಲೆಗೆ ಬಾರದೇ, ಗೈರು ಹಾಜರಾಗುವ ಶಿಕ್ಷಕರ ವಿರುದ್ಧ ಕಠಿಣ ಕ್ರಮ : ಸಚಿವ ಬಿ.ಸಿ ನಾಗೇಶ್ ಎಚ್ಚರಿಕೆ – Vishwanews24

Leave a Reply