ಉಕ್ರೇನ್ ಮೇಲೆ ರಷ್ಯಾ ದಾಳಿ ಬೆನ್ನಲ್ಲೇ ಗಗನಕ್ಕೇರಿದ ತೈಲ ಬೆಲೆ: ಪ್ರತೀ ಬ್ಯಾರೆಲ್ ಗೆ 100 ಡಾಲರ್ – Vishwanews24

Featured, ರಾಷ್ಟ್ರ ನ್ಯೂಸ್

ಉಕ್ರೇನ್ ಮೇಲೆ ರಷ್ಯಾ ದಾಳಿ ಬೆನ್ನಲ್ಲೇ ಗಗನಕ್ಕೇರಿದ ತೈಲ ಬೆಲೆ: ಪ್ರತೀ ಬ್ಯಾರೆಲ್ ಗೆ 100 ಡಾಲರ್ – Vishwanews24

ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಯುದ್ದ ಸಾರಿದ ಬೆನ್ನಲ್ಲೇ ಇದೀಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಗಗನಕ್ಕೇರಿದ್ದು ಪ್ರತೀ ಬ್ಯಾರೆಲ್ ಕಚ್ಚಾ ತೈಲ ಬೆಲೆ 100 ಡಾಲರ್ ಗಡಿ ದಾಟಿದೆ.

ರಷ್ಯಾವು ಪ್ರಪಂಚದ ಎರಡನೇ ಅತಿದೊಡ್ಡ ತೈಲ ಉತ್ಪಾದಕವಾಗಿದ್ದು, ಮುಖ್ಯವಾಗಿ ಯುರೋಪಿಯನ್ ಸಂಸ್ಕರಣಾಗಾರಗಳಿಗೆ ಕಚ್ಚಾ ತೈಲವನ್ನು ಮಾರಾಟ ಮಾಡುತ್ತದೆ ಮತ್ತು ಯುರೋಪ್‌ಗೆ ನೈಸರ್ಗಿಕ ಅನಿಲದ ಅತಿದೊಡ್ಡ ಪೂರೈಕೆದಾರನಾಗಿದೆ. ಪ್ರಸ್ತುತ, ಉಕ್ರೇನ್-ರಷ್ಯಾ ಬಿಕ್ಕಟ್ಟು ಕಚ್ಚಾ ತೈಲದ ಏರಿಕೆಗೆ ಕಾರಣವಾಗಿದೆ.

ಮಣಿಪಾಲ : ಉಪಶಾಮಕ ಆರೈಕೆಗಾಗಿ ಅಂತರರಾಷ್ಟ್ರೀಯ ಕೇಂದ್ರವೆಂದು ಮನ್ನಣೆ ಪಡೆದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ – Vishwanews24

ಫೆಬ್ರವರಿ 24 ರಂದು ಜಾಗತಿಕ ಕಚ್ಚಾ ತೈಲ ಮತ್ತು ಚಿನ್ನದ ಬೆಲೆಗಳು ಗಗನಕ್ಕೇರಿವೆ. 2014 ರಿಂದ ಮೊದಲ ಬಾರಿಗೆ ಬ್ರೆಂಟ್ ಫ್ಯೂಚರ್ಸ್‌ನಲ್ಲಿ ಪ್ರತಿ ಬ್ಯಾರೆಲ್‌ಗೆ $ 100 ಅನ್ನು ದಾಟಿದೆ, ರಷ್ಯಾದ ಉಕ್ರೇನ್ ಬಿಕ್ಕಟ್ಟು ಬ್ರೆಂಟ್ ತೈಲವು 2014 ರಿಂದ ಮೊದಲ ಬಾರಿಗೆ ಬ್ಯಾರೆಲ್‌ಗೆ $ 100 ಕ್ಕೆ ಏರಿತು ಎನ್ನಲಾಗಿದೆ.

ಸದ್ಯ ಚುನಾವಣೆ ಹಿನ್ನಲೆ ಯಾವುದೇ ತೈಲ ಬೆಲೆಯಲ್ಲಿ ಯಾವುದೇ ಏರಿಕೆಯಾಗದೆ ಇದ್ದು, ಕಚ್ಚಾ ತೈಲ ಬೆಲೆ ಏರಿಕೆ ಭಾರತದ ಮೇಲೆ ಕೂಡ ಪರಿಣಾಮ ಬೀರಲಿದೆ. ಚುನಾವಣೆ ಮುಗಿದ ಬಳಿಕ ಭಾರಿ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಸಾಧ್ಯ ಇದೆ ಎಂದು ಹೇಳಲಾಗಿದೆ.

ಉಡುಪಿ: ಫೆ.27 ರಂದು ಪಲ್ಸ್ ಪೋಲಿಯೋ ; 73,995 ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲು ಸಿದ್ಧತೆ : ಜಿಲ್ಲಾಧಿಕಾರಿ – Vishwanews24

Leave a Reply