ಉಚ್ಚಿಲ : ಬೈಕ್ ಗೆ ಟಿಪ್ಪರ್ ಡಿಕ್ಕಿ: ಯುವತಿ‌ ಮೃತ್ಯು, ಯುವಕನಿಗೆ ಗಾಯ – Vishwanews24

Featured, ಉಡುಪಿ

ಉಚ್ಚಿಲ : ಬೈಕ್ ಗೆ ಟಿಪ್ಪರ್ ಡಿಕ್ಕಿ: ಯುವತಿ‌ ಮೃತ್ಯು, ಯುವಕನಿಗೆ ಗಾಯ

ಪಡುಬಿದ್ರಿ: ಬೈಕ್ ಗೆ ಟಿಪ್ಪರ್ ಡಿಕ್ಕಿ ಹೊಡೆದು ಸಹ ಸವಾರೆ ಯುವತಿ ಮೃತಪಟ್ಟು, ಬೈಕ್ ಸವಾರ ಗಾಯಗೊಂಡ ಘಟನೆ ಉಚ್ಚಿಲದಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಕಾಟಿಪಳ್ಳ ನಿವಾಸಿ ನಿಹಾಳ (19) ಮೃತಪಟ್ಟ ಯುವತಿ. ಅಪಘಾತದಲ್ಲಿ ಬೈಕ್ ಸವಾರ ಬೆಳಪುವಿನ ಆಸೀಫ್ ಎಂಬವರು ಗಾಯಗೊಂಡಿದ್ದಾರೆ.

ಯುವಕ ಹಾಗೂ ಯುವತಿಗೆ ಮದುವೆ ನಿಶ್ಚಯವಾಗಿತ್ತು. ಇವರು ಇಂದು ಮಧ್ಯಾಹ್ನ ಉಡುಪಿ ಕಡೆಯಿಂದ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಉಚ್ಚಿಲ ರಾ.ಹೆ ಸಮೀಪದ ರಿಕ್ಷಾ ನಿಲ್ದಾಣದ ಬಳಿ ಬೈಕ್ ಗೆ ಹಿಂದಿನಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ನಲ್ಲಿ ಸಹ ಸವಾರೆಯಾಗಿ ಪ್ರಯಾಣಿಸುತ್ತಿದ್ದ ಯುವತಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುತ್ತಿದ್ದ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ, ಸವಾರ ಯುವಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ : ಚಂಪಾ ಷಷ್ಠಿಯ ಎಡೆಸ್ನಾನ ಸೇವೆಗೆ ಅವಕಾಶ -Vishwanews24 –

Leave a Reply