ಉಚ್ಚಿಲ : ರಸ್ತೆ ಪಕ್ಕಾ ನಿಂತಿದ್ದಾಗ ವಾಹನ ಡಿಕ್ಕಿ ಪ್ರಕರಣ: ಗಾಯಾಳು ಮಗ ಕೂಡಾ ಚಿಕಿತ್ಸೆ ಫಲಿಸದೇ ನಿಧನ – Vishwanews24

Featured, ಉಡುಪಿ

ಉಚ್ಚಿಲ : ರಸ್ತೆ ಪಕ್ಕಾ ನಿಂತಿದ್ದಾಗ ವಾಹನ ಡಿಕ್ಕಿ ಪ್ರಕರಣ: ಗಾಯಾಳು ಮಗ ಕೂಡಾ ಚಿಕಿತ್ಸೆ ಫಲಿಸದೇ ನಿಧನ

ಉಚ್ಚಿಲ: ನಿನ್ನೆ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದ ಅಪಘಾತದಲ್ಲಿ ಬೆಳಗಾವಿ ಮೂಲದ ಪ್ರಭಾಕರ್ ಶಂಕರ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಗಂಭೀರ ಗಾಯಗೊಂಡಿದ್ದ ಅವರ ಮಗ ಸಮರ್ಥ್ ಇವತ್ತು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ಉಚ್ಚಿಲ : ರಸ್ತೆ ಪಕ್ಕಾ ನಿಂತಿದ್ದಾಗ ವಾಹನ ಡಿಕ್ಕಿ : ತಂದೆ ಸಾವು, ಮಗ ಗಂಭೀರ – Vishwanews24 

ಬೆಳಗಾವಿಯಿಂದ ಉಚ್ಚಿಲಕ್ಕೆ ಬಂದಿದ್ದ ಅಪ್ಪ ಮಗ ಬುಧವಾರ ಬೆಳಿಗ್ಗೆ ಬಸ್ಸಿನಿಂದ ಇಳಿದು ರಸ್ತೆ ಬದಿಯಲ್ಲಿ ನಿಂತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿಯಾಗಿತ್ತು. ಅಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮಗನನ್ನ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಲಾಯ್ತಾದ್ರೂ ಚಿಕಿತ್ಸೆ ಫಲಿಸದೇ ಇಂದು ಮಗ ಕೂಡಾ ಸಾವನ್ನಪ್ಪಿದ್ದಾನೆ.

ಪುತ್ತೂರು : ಅನ್ಯಕೋಮಿನ ಯುವಕನಿಂದ ಮಹಿಳೆ ಮೇಲೆ ಲೈಂಗಿಕ ಕಿರುಕುಳ ಪ್ರಕರಣ.. ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ – Vishwanews24

Leave a Reply