ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಶರನ್ನವರಾತ್ರಿ ಸಂಭ್ರಮ- ಇಂದಿನಿಂದ ವೈಭವದ ಉಡುಪಿ ಉಚ್ಚಿಲ ದಸರಾ-2024 – vishwanews24
ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಶರನ್ನವರಾತ್ರಿ ಸಂಭ್ರಮ– ಇಂದಿನಿಂದ ವೈಭವದ ಉಡುಪಿ ಉಚ್ಚಿಲ ದಸರಾ-2024
ಕಾಪು : ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ, ಕರ್ನಾಟಕದ ಕೊಲ್ಲಾಪುರ ಖ್ಯಾತಿಯ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ಅ. 3ರಿಂದ 12ರ ವರೆಗೆ ಜರಗಲಿರುವ ಉಡುಪಿ ಉಚ್ಚಿಲ ದಸರಾ 2024

ಪ್ರತಿದಿನ ಚಂಡಿಕಾ ಹೋಮ, ಅನ್ನಸಂತರ್ಪಣೆ
ಅ. 3ರಿಂದ 12ರ ವರೆಗೆ ಪ್ರತಿದಿನ ಬೆಳಗ್ಗೆ ಚಂಡಿಕಾ ಹೋಮ, ಮಧ್ಯಾಹ್ನ ಮಹಾಪೂಜೆ ಮತ್ತು ಅನ್ನಸಂತರ್ಪಣೆ, ಭಜನೆ, ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ, ಸಾವಿರ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಮಹಾಪೂಜೆ, ಶ್ರೀ ದುರ್ಗಾ ಕಲ್ಲೋಕ್ತ ಪೂಜೆ, ಪ್ರಸಾದ ವಿತರಣೆ, ಆಕರ್ಷಕ ಲೇಸ ಶೋ ಮತ್ತು ವಿವಿಧ ಮನೋರಂಜನ ಕಾರ್ಯಕ್ರಮಗಳು ನಡೆಯಲಿವೆ.
ಅ.12ರಂದು ಶೋಭಾಯಾತ್ರೆ
ಅ. 12ರಂದು ಸಂಜೆ ಉಚ್ಚಿಲ – ಎರ್ಮಾಳು – ಉಚ್ಚಿಲ – ಮೂಳೂರು – ಕಾಪುವಿ ವರೆಗೆ ವೈಭವದ ಶೋಭಾಯಾತ್ರೆ ನಡೆದು ಕಾಪು ಲೈಟ್ ಹೌಸ್ ಬಳಿಯ ಕಡಲ ಕಿನಾರೆಯಲ್ಲಿ ಸುಮಂಗಲೆಯರಿಂದ ಮಹಾಮಂಗಳಾರತಿ, ಬೃಹತ್ ಗಂಗಾರತಿ, ಲೇಸರ್ ಶೋ, ಮ್ಯೂಸಿಕಲ್ ನೈಟ್ ಸಹಿತವಾಗಿ ರಾತ್ರಿ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹ ಜಲಸ್ತಂಭನ ನಡೆಯಲಿದೆ.
ಉಡುಪಿ : ಅ.4ರಿಂದ ಜಿಲ್ಲೆಯ ಯಾವುದೇ ಗ್ರಾ.ಪಂ.ಗಳಲ್ಲಿ ಯಾವುದೇ ಸೇವೆ ಲಭ್ಯವಿಲ್ಲ: ಮಂಜುನಾಥ ಶೆಟ್ಟಿ – vishwanews24
ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದೊಂದಿಗೆ ನಡೆಯುವ 3ನೇ ವರ್ಷದ ಉಚ್ಚಿಲ ದಸರಾ ಪ್ರಯುಕ್ತ
ಅ.3ರಂದು ಸಂಜೆ ನೃತ್ಯ ಸ್ಪರ್ಧೆ,
ಅ. 5ರಂದು ಬೆಳಗ್ಗೆ ಮಕ್ಕಳಿಗಾಗಿ ಶ್ರೀ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ, ಮಧ್ಯಾಹ್ನ ಚಿತ್ರಕಲಾ ಸ್ಪರ್ಧೆ, ಸಂಜೆ ಸಾಮೂಹಿಕ ಕುಣಿತ ಭಜನೆ, ಶ್ರೀ ರಾಮ ಹನುಮಂತ ನೃತ್ಯ ರೂಪಕ,
ಅ. 6ರಂದುಬೆಳಗ್ಗೆ ಕುಸ್ತಿ ಸ್ಪರ್ಧೆ, ಮಧ್ಯಾಹ್ನಹೆಣ್ಮಕ್ಕಳ ಹುಲಿಕುಣಿತಸ್ಪರ್ಧೆ, ಸಂಜೆ ಸಾಮೂಹಿಕ ದಾಂಡಿಯಾ ನೃತ್ಯ, ವಿಸ್ಮಯ ಜಾದೂ,
ಅ. 7ರಂದು ಮಧ್ಯಾಹ್ನ ಮಹಿಳೆಯರಿಗೆ ಮತ್ತು ಪುರುಷರಿಗೆ ರಂಗೋಲಿ ಸ್ಪರ್ಧೆ, ಶತವೀಣಾವಲ್ಲರಿ,
ಅ. 10ರಂದು ದೇಹದಾರ್ಡ್ಯ ಸ್ಪರ್ಧೆ,
ಅ. 11ರಂದು ಅಜಯ್ ವಾರಿಯರ್ ಮತ್ತು ತಂಡದಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಲಿದೆ.
ನವ ಕರ್ನಾಟಕ ರತ್ನ ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ – vishwanews24
