ಉಡುಪಿ:ಜ.26 ರಂದು ನಡೆಯಲಿರುವ ನಾರಾಯಣಗುರು ಸ್ತಬ್ಧಚಿತ್ರ ಜಾಥಾ ʼಸ್ವಾಭಿಮಾನದ ನಡಿಗೆಗೆʼ ಬಜರಂಗದಳ ಬೆಂಬಲ – Vishwanews24
ಉಡುಪಿ:ಜ.26 ರಂದು ನಡೆಯಲಿರುವ ನಾರಾಯಣಗುರು ಸ್ತಬ್ಧಚಿತ್ರ ಜಾಥಾ ʼಸ್ವಾಭಿಮಾನದ ನಡಿಗೆಗೆʼ ಬಜರಂಗದಳ ಬೆಂಬಲ – Vishwanews24
ಉಡುಪಿ: ಕೇರಳದ ಕಮ್ಯುನಿಸ್ಟ್ ಸರಕಾರದ ಕುತಂತ್ರದಿಂದಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಥಬ್ಧ ಚಿತ್ರಕ್ಕೆ ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ಗೆ ಅವಕಾಶ ಸಿಗದಿರುವುದು ನೋವಿನ ಸಂತತಿಯಾಗಿದೆ. ಈ ನಿಟ್ಟಿನಲ್ಲಿ ಜನವರಿ 26 ರಂದು ನಡೆಯಲಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರ ಮೆರವಣಿಗೆಯ ಸ್ವಾಭಿಮಾನದ ನಡಿಗೆಗೆ ಬಜರಂಗದಳ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕರಾದ ಸುನೀಲ್ ಕೆ. ಆರ್ ತಿಳಿಸಿದ್ದಾರೆ.
ಅಸಮಾನತೆಯ ವಿರುದ್ಧ ಹೋರಾಟ ಮಾಡಿದ, ದೇಶ ಕಂಡ ಮಹಾನ್ ಸಂತ ಪೂಜನೀಯ ಬ್ರಹ್ಮಶ್ರೀ ನಾರಾಯಣಗುರುಗಳು, ಸಮಾಜದಲ್ಲಿ ಅಸ್ಪರ್ಶತೆಯ ನಿವಾರಣೆಗೋಸ್ಕರ, ಸಮಾಜದಲ್ಲಿನ ಮೆಲ್ಜಾತಿ ಕೀಲ್ಜಾತಿ ಬೇಧಭಾವವನ್ನು ದೂರಮಾಡಲು ಹೋರಾಟ ಮಾಡಿದ ಮಹಾನ್ ಯೋಗಿಯಾಗಿದ್ದು 26 ಜನವರಿಯಂದು ನಡೆಯಲಿರುವ ಸ್ಥಬ್ದ ಚಿತ್ರದ ಮೆರವಣಿಗೆ ಕಾರ್ಯಕ್ರಮಕ್ಕೆ ಬಜರಂಗದಳ ಬೆಂಬಲ ಸೂಚಿಸುತ್ತದೆ. ಮತ್ತು ಸಂಘಟನೆಯ ಎಲ್ಲಾ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿನಂತಿಸುತ್ತದೆ ಎಂದು ಸುನೀಲ್ ಕೆ. ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
