ಉಡುಪಿ:ನೇಜಾರು ಹತ್ಯೆ ಪ್ರಕರಣ – ಆರೋಪಿಯನ್ನು  ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು – vishwanews24

Featured, ಉಡುಪಿ

ಉಡುಪಿ:ನೇಜಾರು ಹತ್ಯೆ ಪ್ರಕರಣ – ಆರೋಪಿಯನ್ನು  ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು

ಉಡುಪಿ: ಉಡುಪಿಯ ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಉಡುಪಿ ಪೊಲೀಸರು ಬೆಳಗಾವಿ ಪೊಲೀಸರ ‌ಸಹಕಾರದಿಂದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿಯ ಕುಡುಚಿಯಲ್ಲಿ ಬಂಧಿಸಿದ ಉಡುಪಿ ಪೊಲೀಸರು ಪ್ರವೀಣ್​​​​ ಅರುಣ್​​​ ಚೌಗಲೆ(35) ಎಂಬಾತನನ್ನು ಬಂಧಿಸಿದ್ದಾರೆ. ಈತ ಮಂಗಳೂರು ​​ ಏರ್​ಪೋರ್ಟ್​ ಸೆಕ್ಯೂರಿಟಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸಿಆರ್‌‌ಪಿಎಫ್‌ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿ ಮಹಾರಾಷ್ಟ್ರ ಸಾಂಗ್ಲಿ ಮೂಲದವನಾಗಿದ್ದಾನೆ ಎಂದು ತಿಳಿದುಬಂದಿದೆ.

ಕುಡಚಿಯಲ್ಲಿರುವ ಸಂಬಂಧಿಯೊಬ್ಬರ ಮನೆಯಲ್ಲಿ ಆರೋಪಿ ಅವಿತುಕೊಂಡಿದ್ದು, ಮೊಬೈಲ್​​ ಟವರ್​ ಲೊಕೇಶನ್​​​ ಆಧರಿಸಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಇನ್ನೊಂದೆಡೆ ಕೃತ್ಯಕ್ಕೆ ಸುಪಾರಿ ನೀಡಿದ ಆರೋಪಿಗಳ ಪತ್ತೆಗೆ ಕೇರಳದ ಕೊಟ್ಟಾಯಂ ಕಡೆಗೆ ಡಿವೈಎಸ್‌ಪಿ ದಿನಕರ್ ಪಿ.ನೇತೃತ್ವದ ತಂಡ ಹೋಗಿದ್ದು ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದೆ.

Leave a Reply