ಉಡುಪಿಯಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ “ವಿವೇಜಾ” ಬ್ರಾಂಡ್ ಆರೋಗ್ಯ ಪೇಯ : vishwanews24
ಉಡುಪಿಯಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ “ವಿವೇಜಾ” ಬ್ರಾಂಡ್ ಆರೋಗ್ಯ ಪೇಯ : vishwanews24
ಉಡುಪಿ: ರಿಯಲ್ ಎಂಜಾಯ್ ಪ್ರೈವೇಟ್ ಲಿಮಿಟೆಡ್ ಮುಂಬಯಿ ಇದರ ವಿವೇಜಾ ಎಂಬ ಬ್ರಾಂಡಿನ ಆರೋಗ್ಯ ಪೇಯ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಉಡುಪಿ ಮಣಿಪಾಲ್ ಇನ್ ಖಾಸಗಿ ಹೋಟೆಲ್ ನಲ್ಲಿ ದಿನಾಂಕ 20 ಫೆಬ್ರವರಿ ಯ ಆದಿತ್ಯವಾರ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ಕುಮಾರಿ ಬಿಶಾಕ ಕುಮಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಯುರ್ವೇದ ವೈದ್ಯೆ ಶ್ರೀಮತಿ ಸಬೀನ ಬಾನು ಉಪಸ್ಥಿತರಿರಲಿದ್ದು ವಿವೇಜಾ ಆರೋಗ್ಯ ಪೇಯದ ಬಗ್ಗೆ ಸಮಗ್ರ ಮಾಹಿತಿ ನೀಡಲಿರುವರು ಎಂದು ಅವರು ಹೇಳಿದರು.
ಒಟ್ಟು 12 ರಾಜ್ಯದಲ್ಲಿ ಈ ಪ್ರಾಡಕ್ಟ್ ಮಾರ್ಕೆಟಿಂಗ್ ಮಾಡಲಿಕ್ಕಿದ್ದು ಅತ್ಯಂತ ಸಾವಯವ ಆರೋಗ್ಯ ಪೇಯಾವಾಗಿದ್ದು ಇದೊಂದು ಹ್ಯುಮಿನಿಟಿ ಪವರ್ ಜಾಸ್ತಿ ಮಾಡಲು ಸಹಕಾರಿಯಾಗುತ್ತೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪದ್ಮ ಬೆಲ್ಚಡ,ಶಮನ್ ಮಂಗಳೂರು, ಅಶೋಕ್ ಆಚಾರ್ಯ, ಗಿರೀಶ್ ಬೆಳ್ತಂಗಡಿ ಉಪಸ್ಥಿತರಿದ್ದರು.
