ಉಡುಪಿ : ಅಂಚೆ ಜೀವ ವಿಮಾ ಪ್ರತಿನಿಧಿಗಳ ಆಯ್ಕೆ : ನೇರ ಸಂದರ್ಶನ – vishwanews24
ಉಡುಪಿ : ಅಂಚೆ ಜೀವ ವಿಮಾ ಪ್ರತಿನಿಧಿಗಳ ಆಯ್ಕೆ : ನೇರ ಸಂದರ್ಶನ
ಉಡುಪಿ: ಉಡುಪಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಪ್ರತಿನಿಧಿಗಳ ನೇರ ನೇಮಕಾತಿಗೆ ಸಂದರ್ಶನವು ಆಗಸ್ಟ್ 19 ರಂದು ಬೆಳಗ್ಗೆ 10.15 ಕ್ಕೆ ಉಡುಪಿಯ ಪ್ರಧಾನ ಅಂಚೆ ಕಚೇರಿಯ ಮೊದಲ ಮಹಡಿಯಲ್ಲಿರುವ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ನಡೆಯಲಿದ್ದು, ಆಸಕ್ತ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ, 18 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಅರ್ಜಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.
ನಿವೃತ್ತ ಸರ್ಕಾರಿ / ಖಾಸಗಿ ನೌಕರರು, ಸ್ವ–ಸಹಾಯ ಸಂಘದ ಸದಸ್ಯರು, ನಿರುದ್ಯೋಗಿಗಳು, ಸ್ವಯಂ ಉದ್ಯೋಗ ನಿರತರು, ಅರೆಕಾಲಿಕ ಉದ್ಯೋಗಿಗಳು, ಮಾಜಿ ವಿಮಾ ಪ್ರತಿನಿಧಿಗಳು/ ಸಲಹೆಗಾರರು, ಮಾಜಿ ಸೈನಿಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮಂಡಳಿ ಸದಸ್ಯರು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು, ನಿವೃತ್ತ ಶಿಕ್ಷಕರು, ಪಿ.ಓ.ಎಸ್.ಬಿ ಏಜೆಂಟರು ಮೊದಲಾದವರಿಗೆ ಅವಕಾಶವಿದ್ದು, ಉತ್ತಮ ಸಂವಹನ ಕೌಶಲ್ಯ ಹಾಗೂ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
ಇತಿಹಾಸ ಪ್ರಸಿದ್ಧ ಕಾಪು ಮಾರಿಗುಡಿಗಳಲ್ಲಿ ಜು. 28 ಮತ್ತು 29ರಂದು ವೈಭವದ ಆಟಿ ಮಾರಿಪೂಜೆ ಸಂಭ್ರಮ – vishwanews24
ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿ ಅಥವಾ ಅಂಚೆ ಜೀವ ವಿಮೆ ಅಭಿವೃದ್ಧಿ ಅಧಿಕಾರಿ, ಉಡುಪಿ ಅಂಚೆ ವಿಭಾಗ, ಉಡುಪಿ ಮೊ.ನಂ: 9482914676 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣ ತಿಳಿಸಿದೆ.
