ಉಡುಪಿ: ಆನ್ಲೈನ್ ನಲ್ಲಿ ಕಡಿಮೆ ಬೆಲೆಗೆ ಗೃಹೋಪಯೋಗಿ ಉಪಕರಣಗಳನ್ನು ನೀಡುವುದಾಗಿ ನಂಬಿಸಿ ಯುವತಿಗೆ ವಂಚನೆ – Vishwanews24

Featured, ಉಡುಪಿ

ಉಡುಪಿ: ಆನ್ಲೈನ್ ನಲ್ಲಿ ಕಡಿಮೆ ಬೆಲೆಗೆ ಗೃಹೋಪಯೋಗಿ ಉಪಕರಣಗಳನ್ನು ನೀಡುವುದಾಗಿ ನಂಬಿಸಿ ಯುವತಿಗೆ ವಂಚನೆ

ಉಡುಪಿ : ಆನ್ಲೈನ್ ನಲ್ಲಿ ಕಡಿಮೆ ಬೆಲೆಗೆ ಗೃಹೋಪಯೋಗಿ ಉಪಕರಣಗಳನ್ನು ನೀಡುವುದಾಗಿ ನಂಬಿಸಿ ಯುವತಿಯೊಬ್ಬರಿಂದ ಹಣ ಪಡೆದು ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೂಡುಬೆಳ್ಳೆ ಗ್ರಾಮದ ಶ್ರೀ ಪ್ರಜ್ಞಾ ಭಟ್ ಅವರು ಮನೆಗೆ ಫ್ರೀಡ್ಜ್, ವಾಷಿಂಗ್ ಮಿಶನ್‌ ಅನ್ನು ಖರೀದಿಸುವ ಸಲುವಾಗಿ OLX ಆ್ಯಪ್‌ ನಲ್ಲಿ ಹುಡುಕುತ್ತಿರುವಾಗ ಅಪರಿಚಿತ ವ್ಯಕ್ತಿ ತಾನು ಮಿಲಿಟರಿಯಲ್ಲಿ ಕೆಲಸ ಮಾಡುತ್ತೀರುವುದಾಗಿ ತಿಳಿಸಿ ತನ್ನ ಬಳಿ ಮನೆಗೆ ಬೇಕಾದ ವಸ್ತುಗಳು ಕಡಿಮೆ ಬೆಲೆಯಲ್ಲಿ ವಸ್ತುಗಳು ಸಿಗುತ್ತದೆ ಎಂಬುದಾಗಿ ನಂಬಿಸಿದ್ದನು. ಆ ಬಳಿಕ ಶ್ರೀ ಪ್ರಜ್ಞಾ ಅವರಿಂದ ಹಂತ ಹಂತವಾಗಿ 56,270 ರೂ. ಹಣವನ್ನು ಆನ್‌ಲೈನ್‌ ಮುಖೇನಾ ಪಡೆದುಕೊಂಡು ಫ್ರೀಡ್ಜ್, ವಾಷಿಂಗ್ ಮಿಶನ್‌ ನೀಡದೆ, ಪಡೆದ ಹಣವನ್ನು ವಾಪಾಸ್ಸು ನೀಡದೆ ವಂಚಿಸಿರುವುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ:ಚಾಲಕನ ನಿಯಂತ್ರಣ ತಪ್ಪಿ ಗೇರುಬೀಜ ಸಾಗಾಟದ ಲಾರಿ ಪಲ್ಟಿ: ಚಾಲಕ , ಕ್ಲಿನರ್ ಅಪಾಯದಿಂದ ಪಾರು – Vishwanews24

Leave a Reply