ಉಡುಪಿ: ಆನ್ಲೈನ್ ಮೂಲಕ ಟಾಸ್ಕ್ ಪೂರೈಸಿ ಹಣ ಗಳಿಸುವ ಪಾರ್ಟ್ ಟೈಮ್ ಕೆಲಸದ ಆಮಿಷ – ವ್ಯಕ್ತಿಗೆ 4.87 ಲ.ರೂ. ವಂಚನೆ – Vishwanews24
ಉಡುಪಿ: ಆನ್ಲೈನ್ ಮೂಲಕ ಟಾಸ್ಕ್ ಪೂರೈಸಿ ಹೆಚ್ಚಿನ ಹಣ ಗಳಿಸುವ ಪಾರ್ಟ್ ಟೈಮ್ ಕೆಲಸದ ಆಮಿಷ – ವ್ಯಕ್ತಿಗೆ 4.87 ಲ.ರೂ. ವಂಚನೆ
ಉಡುಪಿ : ಆನ್ಲೈನ್ ಮೂಲಕ ಟಾಸ್ಕ್ ಪೂರೈಸಿ ಹೆಚ್ಚಿನ ಹಣ ಗಳಿಸುವ ಪಾರ್ಟ್ ಟೈಮ್ ಕೆಲಸದ ಆಮಿಷವೊಡ್ಡಿ ವ್ಯಕ್ತಿಗೆ 4.87 ಲಕ್ಷ ರೂ. ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಅಲ್ಬಾಡಿಯ ಬರಗುಂಡಿ ನಿವಾಸಿ ಶಶಿಧರ ಅವರು ಮೇ 1 ರಂದು ಫೇಸ್ ಬುಕ್ ನಲ್ಲಿ ಕಂಡುಬಂದ ಪಾರ್ಟ್ ಟೈಮ್ ಜಾಬ್ ನೀಡುವ ಸಂದೇಶವನ್ನು ನಿಜವೆಂದು ನಂಬಿ ಲಾಗಿನ್ ಆಗಿದ್ದರು. ಅದರಲ್ಲಿ ಟಾಸ್ಕ್ ಕಂಪ್ಲೀಟ್ ಮಾಡಿದಲ್ಲಿ ಕಮೀಶನ್ ಹಣ ನೀಡುವುದಾಗಿ ಸೂಚಿಸಲಾಗಿತ್ತು. ಇದನ್ನು ನಂಬಿದ ಶಶಿಧರ ಅವರು ಟಾಸ್ಕ್‌ಗಾಗಿ ಹಣ ಹಾಕುವಂತೆ ಟೆಲಿಗ್ರಾಮ್ ಆಪ್‌ನಲ್ಲಿ ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಒಟ್ಟು 4,87,000 ರೂ ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿದ್ದರು. ಆದರೆ ಆರೋಪಿಗಳು ಹಣವನ್ನು ಪಡೆದು ಜಾಬ್ ನೀಡದೆ, ಪಡೆದ ಹಣವನ್ನು ವಾಪಸ್ಸು ನೀಡದೆ ವಂಚಿಸಿರುವುದಾಗಿ ನೀಡಿದ ದೂರಿನಂತೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಈಜಲು ತೆರಳಿದ ಇಬ್ಬರು ನೀರಲ್ಲಿ ಮುಳುಗಿ ಸಾವು – ಮೂವರ ರಕ್ಷಣೆ – Vishwanews24
