ಉಡುಪಿ: ಇಂದು ಶಿರೂರು ಮಠಕ್ಕೆ 31 ನೇ ಉತ್ತರಾಧಿಕಾರಿ  ಘೋಷಣೆ -Vishwanews24

Featured, ಉಡುಪಿ

ಉಡುಪಿ: ಇಂದು ಶಿರೂರು ಮಠಕ್ಕೆ 31 ನೇ ಉತ್ತರಾಧಿಕಾರಿ  ಘೋಷಣೆ -Vishwanews24

ಉಡುಪಿ: ಶಿರೂರು ಶ್ರೀಗಳ ನಿಧನದಿಂದಾಗಿ ಸುಮಾರು ಮೂರು ವರ್ಷಗಳಿಂದ ತೆರವಾಗಿದ್ದ ಉತ್ತರಾಧಿಕಾರಿಯ ಅಧಿಕೃತ ಘೋಷಣೆ ಇಂದು ನಡೆಯಲಿದೆ. ಈಗಾಗಲೇ ಮಠಕ್ಕೆ ನೂತನ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲಾಗಿದೆ. ಮಠದ ಹಿರಿಯ ಯತಿಗಳಾಗಿದ್ದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ಮೃತ ಪಟ್ಟು ಸುಮಾರು ಮೂರು ವರ್ಷಗಳ ಬಳಿಕ ಉತ್ತರಾಧಿಕಾರಿಯ ನೇಮಕ ನಡೆಯುತ್ತಿದೆ.

ನೂತನ ಮಠಾಧಿಪತಿಯ ಹೆಸರು ಹಾಗೂ ಪಟ್ಟಾಭಿಷೇಕದ ಕುರಿತು ಇಂದು ಶಿರೂರು ಮೂಲ ಮಠದಲ್ಲಿ ಮಾಹಿತಿ ನೀಡಲಾಗುವುದು ಎಂದು ಮಠದ ಮೂಲಗಳು ತಿಳಿಸಿವೆ. ಶಿರೂರು ಮಠದ 31ನೇ ಉತ್ತರಾಧಿಕಾರಿ ನಿಡ್ಲೆ ಮೂಲದವರು.

ಜುಲೈ 19, 2018ರಂದು ಶಿರೂರು ಮಠದ ಹಿರಿಯ ಯತಿ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಧನರಾಗಿದ್ದರು. ಮಠಕ್ಕೆ ಉತ್ತರಾಧಿಕಾರಿ ನೇಮಕ ಮಾಡಬೇಕು ಎಂಬ ಒತ್ತಾಯ ಶ್ರೀಗಳ ಅಭಿಮಾನಿಗಳಿಂದ ಕೇಳಿಬಂದಿತ್ತು.ಈ ಮಧ್ಯೆ ಶಿರೂರು ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಉತ್ತರಾಧಿಕಾರಿ ಆಯ್ಕೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ರಾಮನವಮಿ : ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ ಮೋದಿ -Vishwanews24