ಉಡುಪಿ : ಎರಡು ತಂಡಗಳ ನಡುವೆ ಗ್ಯಾಂಗ್ ವಾರ್ – ಕಾರುಗಳ ಢಿಕ್ಕಿ ಹೊಡೆಸಿ ಹೊಡೆದಾಟ: ವಿಡಿಯೋ ವೈರಲ್ – vishwanews24
ಉಡುಪಿ : ಎರಡು ತಂಡಗಳ ನಡುವೆ ಗ್ಯಾಂಗ್ ವಾರ್ ..
ಕಾಪು ಮೂಲದ ಎರಡು ತಂಡಗಳ ಯುವಕರು
ಕಾರುಗಳ ಢಿಕ್ಕಿ ಹೊಡೆಸಿ ಹೊಡೆದಾಟ: ವಿಡಿಯೋ ವೈರಲ್
ಮೇ 18ರಂದು ಉಡುಪಿ ಕುಂಜಿಬೆಟ್ಟುವಿನಲ್ಲಿ ನಡೆದಿರುವ ಘಟನೆ
ಆರೋಪಿಗಳಿಗೆ ಜೂನ್ 1 ರ ವರೆಗೆ ನ್ಯಾಯಂಗ ಬಂಧನ
ಉಡುಪಿ: ಉಡುಪಿ-ಮಣಿಪಾಲ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇ 18ರಂದು ಎರಡು ತಂಡಗಳ ನಡುವೆ ಗ್ಯಾಂಗ್ ವಾರ್ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಾಪು ಮೂಲದ ಎರಡು ತಂಡಗಳ ಯುವಕರು ಉಡುಪಿ ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರುಗಳಲ್ಲಿ ಬಂದು ಜಗಳ ಮಾಡಿಕೊಂಡು ಕಾರಿನಲ್ಲಿಯೇ ಹೊಡೆದಾಟ ಮಾಡಿಕೊಂಡಿದ್ದಾರೆ.
ಮೇ 18ರಂದು ಉಡುಪಿ ಕುಂಜಿಬೆಟ್ಟುವಿನಲ್ಲಿ ನಡೆದಿರುವ ಈ ಘಟನೆ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಆರೋಪಿಗಳಿಗೆ ಜೂನ್ 1 ರ ವರೆಗೆ ನ್ಯಾಯಂಗ ಬಂಧನ ವಿಧಿಸಿದ್ದಾರೆ.
ಮೂಲಗಳ ಪ್ರಕಾರ, ಈ ಎರಡು ಗ್ಯಾಂಗ್ಗಳ ಮಧ್ಯೆ ಕಾರು ಮಾರಾಟಕ್ಕೆ ಸಂಬಂಧಿಸಿದಂತೆ ವಿವಾದವಿತ್ತು ಎನ್ನಲಾಗಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
