ಉಡುಪಿ : ಎಲ್ಲಾ ಮುಸಲ್ಮಾನರು ದೇಶದ್ರೋಹಿಗಳಲ್ಲ, ದೇಶಭಕ್ತರೂ ಕೂಡಾ ಇದ್ದಾರೆ,ಆದರೆ ರಾಷ್ಟ್ರ ಭಕ್ತರೆಲ್ಲರೂ ಬಿಜೆಪಿಯವರೇ : ಈಶ್ವರಪ್ಪ -Vishwanews24

Featured, ಉಡುಪಿ

ಉಡುಪಿ : ಎಲ್ಲಾ ಮುಸಲ್ಮಾನರು ದೇಶದ್ರೋಹಿಗಳಲ್ಲ, ದೇಶಭಕ್ತರೂ ಕೂಡಾ ಇದ್ದಾರೆ,ಆದರೆ ರಾಷ್ಟ್ರ ಭಕ್ತರೆಲ್ಲರೂ ಬಿಜೆಪಿಯವರೇ : ಈಶ್ವರಪ್ಪ –Vishwanews24

ಉಡುಪಿ, : ”ಎಲ್ಲಾ ಮುಸಲ್ಮಾನರು ದೇಶದ್ರೋಹಿಗಳಲ್ಲ, ದೇಶಭಕ್ತರೂ ಕೂಡಾ ಇದ್ದಾರೆ. ಆದರೆ ರಾಷ್ಟ್ರ ಭಕ್ತರೆಲ್ಲರೂ ಬಿಜೆಪಿಯವರೇ” ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪನವರು ಹೇಳಿದರು.

ಉಡುಪಿಯ ಮಣಿಪಾಲ್ ಇನ್ ಹೊಟೇಲ್ ಮತ್ತು ಕನ್ವೆಂಶನ್ ಸೆಂಟರ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ”ಎಲ್ಲಾ ಮುಸಲ್ಮಾನರು ದೇಶದ್ರೋಹಿಗಳಲ್ಲ, ದೇಶಭಕ್ತರೂ ಕೂಡಾ ಇದ್ದಾರೆ. ಮುಸಲ್ಮಾನರ ಓಟು ಬೇಡ ‌ಎಂದು ನಾವು ಹೇಳಿಲ್ಲ” ಎಂದರು.

”ರಾಷ್ಟ್ರ ಭಕ್ತರೆಲ್ಲರೂ ಬಿಜೆಪಿಯವರೇ, ಆದರೆ ಕಾಂಗ್ರೆಸ್ ನಾಯಕರು ಮುಸ್ಲಿಂ ಸಮುದಾಯವನ್ನು ಒಲಿಸುವಲ್ಲಿ ನಿರತವಾಗಿದೆ. ಅವರೆಲ್ಲರೂ ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಎನ್ನುವ ಭ್ರಮೆಯಲ್ಲಿ ಕಾಂಗ್ರೆಸ್‌ ಇದೆ” ಎಂದು ಹೇಳಿದ ಅವರು, ”ಕಾಂಗ್ರೆಸ್ ತನ್ನ ಮನೋಭಾವನೆ ಬದಲಾಯಿಸಿಕೊಳ್ಳಬೇಕು” ಎಂದು ಕುಟುಕಿದರು.

”ವಿರೋಧ ಪಕ್ಷದವರಿಗೆ ಎಸಿ ರೂಮ್‌ನಲ್ಲಿ ಕೂತು ಟ್ವೀಟ್ ಮಾಡುವುದೇ ಅಭ್ಯಾಸವಾಗಿ ಬಿಟ್ಟಿದೆ. ರಾಜ್ಯದಲ್ಲಿ ವಿರೋಧ ಪಕ್ಷವೇ ಇಲ್ಲದಂತಾಗಿದೆ. ಕಾಂಗ್ರೆಸ್ ರಾಜ್ಯದಲ್ಲಿ ನಿರ್ನಾಮ ಆಗಿದೆ” ಎಂದು ಟೀಕಿಸಿದರು.

”ಜೆಡಿಎಸ್‌ ನಾಯಕ ಕುಮಾರಸ್ವಾಮಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವ ಹಗಲು ಕನಸನ್ನು ಕಾಣುತ್ತಿದ್ದಾರೆ” ಎಂದು ಹೇಳಿದರು.

http://ಜ.15ರಿಂದ ರಾಜ್ಯದಲ್ಲಿ ಪದವಿಪೂರ್ವ, ಸ್ನಾತಕೋತ್ತರ, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕೋರ್ಸ್‌ಗಳ ಎಲ್ಲಾ ವಿದ್ಯಾರ್ಥಿಗಳಿಗೆ ತರಗತಿ ಆರಂಭ -Vishwanews24