ಉಡುಪಿ: ಕಡಿಯಾಳಿ ಮಹಿಷಮರ್ದಿನಿಯ ದೇವಳದ ತಿರುಗುವ ಮುಚ್ಚಿಗೆ ಮತ್ತು ತಾಯಿ ಫೋಟೋವನ್ನು ಫೇಸ್ಬುಕ್ ಪೇಜ್ನಲ್ಲಿ ಹಂಚಿಕೊಂಡ ಬಿಗ್ ಬಿ ಅಮಿತಾಭ್ – Vishwanews24
ಉಡುಪಿ: ಕಡಿಯಾಳಿ ಮಹಿಷಮರ್ದಿನಿಯ ಫೋಟೋವನ್ನು ಫೇಸ್ಬುಕ್ ಪೇಜ್ನಲ್ಲಿ ಹಂಚಿಕೊಂಡ ಬಿಗ್ ಬಿ ಅಮಿತಾಭ್
ಉಡುಪಿ: ದೇಶಾದ್ಯಂತ ಮೆಚ್ಚುಗೆ ಗಳಿಸಿದ ಕಡಿಯಾಳಿ ದೇವಳದ ತಿರುಗುವ ಮುಚ್ಚಿಗೆ ಮತ್ತು ತಾಯಿ ಮಹಿಷಮರ್ದಿನಿಯ ಚಿತ್ರವನ್ನು ಬಿಗ್ ಬಿ ಖ್ಯಾತಿಯ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ದೇವಳದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಜೂನ್ 10ರಂದು ತಮ್ಮ ಫೇಸ್ಬುಕ್ ಪೇಜ್ನಲ್ಲಿ “May God Remember all hopes” ಎಂದು ಬರೆದು ದೇವರ ಚಿತ್ರದ ಜೊತೆಗೆ ತಮ್ಮಅಭಿಪ್ರಾಯ ಹಂಚಿಕೊಂಡಿದ್ದಾರೆ.


ಈ ಚಿತ್ರವನ್ನು 30 ಸಾವಿರ ಜನ ಲೈಕ್ ಮಾಡಿದ್ದು ಸಾವಿರಾರು ಜನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
47.5 ಮಿಲಿಯನ್ Twitter ನಲ್ಲಿ followers ಹೊಂದಿರುವ ಭಾರತೀಯ ಸಿನಿಮಾರಂಗದ ಹೆಸರಾಂತ ಹಿರಿಯ ನಟ ಅಮಿತಾಭ್ ಬಚ್ಚನ್ ಕಡಿಯಾಳಿ ಶ್ರೀ ಮಹಿಷಮರ್ಧಿನಿ ಅಮ್ಮನ ಚಿತ್ರವನ್ನು ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ.
ಉಚ್ಚಿಲ : ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದರೋಡೆ : ನಗದು ಸಹಿತ 2 ಬೆಳ್ಳಿ ತಟ್ಟೆ ಕಳವು – Vishwanews24
