ಉಡುಪಿ : ಕೆನರಾ ಬ್ಯಾಂಕ್ ಶಾಖೆಯಲ್ಲಿ ಖೋಟಾ ನೋಟುಗಳು ಪತ್ತೆ – vishwanews24
ಉಡುಪಿ : ಕೆನರಾ ಬ್ಯಾಂಕ್ ಶಾಖೆಯಲ್ಲಿ ಖೋಟಾ ನೋಟುಗಳು ಪತ್ತೆ
ಉಡುಪಿ : ಕೆನರಾ ಬ್ಯಾಂಕ್ ಉಡುಪಿ ಶಾಖೆಯಲ್ಲಿ 500ರೂ. ಮುಖ ಬೆಲೆಯ ಐದು ಖೋಟಾ ನೋಟುಗಳು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಆ.30ರಂದು ಬೆಳಗ್ಗೆ ಅನಾಮಧೇಯ ವ್ಯಕ್ತಿಯೊಬ್ಬ ಬಂದು ರೇವು ಎಂಬವರ ಖಾತೆಗೆ 50,000ರೂ. ಹಣವನ್ನು ಡೆಪಾಸಿಟ್ ಮಾಡಿದ್ದನು. ಆ ವೇಳೆ ಬ್ಯಾಂಕ್ನಲ್ಲಿ ತುಂಬಾ ಜನರು ಇದ್ದ ಕಾರಣ ಕ್ಯಾಶಿಯರ್ ಮುರುಳಿ ಅವರಿಗೆ ಇದು ಗಮನಕ್ಕೆ ಬಂದಿರ ಲಿಲ್ಲ. ಬಿಡುವಿನ ವೇಳೆಯಲ್ಲಿ ಕ್ಯಾಶಿಯರ್ ಎಲ್ಲ ಹಣವನ್ನು ಮೆಷಿನ್ನಲ್ಲಿ ಹಾಕಿ ಪರಿಶೀಲಿಸುವಾಗ 500 ರೂ. ಮುಖಬೆಲೆಯ 5 ಖೋಟಾ ನೋಟುಗಳು ಇರುವುದು ಕಂಡುಬಂದಿದೆ.
ಬ್ಯಾಂಕ್ನ ಚಿಫ್ ಮ್ಯಾನೇಜರ್ ಜೆಸ್ಟಿನ್ ಮ್ಯಾಥ್ಯೂ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ: ಎರಡು ಅಂಗಡಿಗಳಿಗೆ ನುಗ್ಗಿ ನಗದು ಸಹಿತ ಇತರ ಸೊತ್ತು ಕಳ್ಳತನ: ಮೂವರ ಬಂಧನ – vishwanews24
