ಉಡುಪಿ: ಕೋವಿಡ್ ಟೆಸ್ಟ್‌ಗೆ ಸಹಕರಿಸಿದರೆ ಜಿಲ್ಲೆಯಲ್ಲೂ ಶಾಲೆಗಳನ್ನು ತೆರೆಯಲು ಸಾಧ್ಯ : ಜಿಲ್ಲಾಧಿಕಾರಿ -Vishwanews24
ಉಡುಪಿ: ಕೋವಿಡ್ ಟೆಸ್ಟ್‌ಗೆ ಸಹಕರಿಸಿದರೆ ಜಿಲ್ಲೆಯಲ್ಲೂ ಶಾಲೆಗಳನ್ನು ತೆರೆಯಲು ಸಾಧ್ಯ : ಜಿಲ್ಲಾಧಿಕಾರಿ -Vishwanews24
ಉಡುಪಿ: ಜಿಲ್ಲೆಯಲ್ಲೂ ಶಾಲೆಗಳನ್ನು ಪ್ರಾರಂಭಿಸಬೇಕಾದ್ದರಿಂದ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಕೋವಿಡ್ ಟೆಸ್ಟ್ ಮಾಡಬೇಕೆಂದು ಉಡುಪಿ ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.
ಈ ತಿಂಗಳ ಅಂತ್ಯಕ್ಕೆ ಕೊರೋನಾ ಪಾಸಿಟಿವಿಟಿ ಪ್ರಮಾಣ ಶೇ.2ಕ್ಕಿಂತ ಕಡಿಮೆ ತರಬೇಕೆನ್ನುವುದು ನಮ್ಮ ಗುರಿ ಇದೆ.
ಪಾಸಿಟಿವಿಟಿ ಶೇ. ಎರಡಕ್ಕಿಂತ ಕಡಿಮೆ ದಾಖಲಾದರೆ ಜಿಲ್ಲೆಯ ಎಲ್ಲಾ ಶಾಲಾ ಮಕ್ಕಳು ತಮ್ಮ ವಿದ್ಯಾರ್ಜನೆ ಮುಂದುವರಿಸಲು ಸಾಧ್ಯವಾಗುತ್ತದೆ, ಆದ್ದರಿಂದ ಜಿಲ್ಲೆ ಜನರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಮನವಿ ಮಾಡಿದರು.
ಕೆಲವರು ಸಭೆ ಸಮಾರಂಭಗಳನ್ನು ಜಿಲ್ಲಾಡಳಿತ ಆದೇಶ ಉಲ್ಲಂಘಿಸಿ ನಡೆಸುತ್ತಿರುವುದು ಕಂಡು ಬಂದಿರುವುದು ತಿಳಿದು ಬಂದಿದೆ. ಅಂತಹವರ ವಿರುದ್ದ ಕಠಿನ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ವ್ಯಾಕ್ಸಿನ್ ನೀಡುವುದರಲ್ಲಿ ರಾಜ್ಯದಲ್ಲಿ ಉಡುಪಿ ಎರಡನೇ ಸ್ಥಾನದಲ್ಲಿದೆ. ಸುಮಾರು 64 ಶೇ. 60 ವರ್ಷ ಮೇಲ್ಪಟ್ಟವರಿಗೆ ಸಹಿತ ಶೇ. 85 ವ್ಯಾಕ್ಸಿನ್ ನೀಡಲಾಗಿದೆ. ಇನ್ನುಳಿದ ಶೇ.15 ಜನರಿಗೆ ಜಿಲ್ಲಾಡಳಿತವೇ ಮನೆಮನೆಗೆ ಹೋಗಿ ವ್ಯಾಕ್ಸಿನ್ ನೀಡುವ ಗುರಿ ಹೊಂದಿದ್ದಾಗಿ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಉಡುಪಿಗೆ ಒಂದು ವಾರದಿಂದ ಎಂಟರಿಂದ ಹತ್ತು ಸಾವಿರರೆಗೆ ವ್ಯಾಕ್ಸಿನ್ ಬರುತ್ತಿದೆ. ಕ್ರಮಬದ್ದವಾಗಿ ನೀಡುವ ವ್ಯವಸ್ಥೆ ಆಗುತ್ತಿದೆ ಎಂದರು. ಸ್ವಾಬ್ ಸಂಗ್ರಹಕ್ಕೆ ಬೇಕಾದ 65 ತಂಡಗಳು ಜಿಲ್ಲೆಯಲ್ಲಿ ಇದೆ. ಮಾತ್ರವಲ್ಲದೆ ಡಾಟಾ ಎಂಟ್ರಿಗೆ ಸಿಬ್ಬಂದಿಗಳು ಕೂಡ ಇದ್ದು ನಮ್ಮ ಜಿಲ್ಲೆಯಲ್ಲಿ ಪಾಸಿಟಿವಿಟಿ ಶೇ. 2ರ ಒಳಗೆ ತರುವ ಗುರಿ ಇದೆ ಎಂದು ತಿಳಿಸಿದರು.
