ಉಡುಪಿ : ಕೋವಿಡ್ 19 – ಸರಳವಾಗಿ ನಡೆದ ಶ್ರೀಕೃಷ್ಣಾಪುರ ಮಠಾಧೀಶರ ಪುರಪ್ರವೇಶ – Vishwanews24
ಉಡುಪಿ : ಕೋವಿಡ್ 19 – ಸರಳವಾಗಿ ನಡೆದ ಶ್ರೀಕೃಷ್ಣಾಪುರ ಮಠಾಧೀಶರ ಪುರಪ್ರವೇಶ – Vishwanews24
ಉಡುಪಿ: ಭಾವಿ ಪರ್ಯಾಯ ಪೀಠಾಧಿಪತಿಗಳಾದ ಕೃಷ್ಣಾಪುರ ಮಠದ ವಿದ್ಯಾಸಾಗರತೀರ್ಥ ಶ್ರೀಗಳು ಸೋಮವಾರ ನಗರದ ಜೋಡುಕಟ್ಟೆಯ ಮೂಲಕ ಪುರಪ್ರವೇಶ ಮಾಡಿದರು.
ಪರ್ಯಾಯ ಪೂರ್ವಭಾವಿಯಾಗಿ ತೀರ್ಥಕ್ಷೇತ್ರಗಳ ಯಾತ್ರೆ ಮುಗಿಸಿ ಬಂದ ವಿದ್ಯಾಸಾಗರತೀರ್ಥ ಶ್ರೀಗಳಿಗೆ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಹೂಮಾಲೆ ಹಾಕಿ ಸ್ವಾಗತ ಕೋರಿದರು.
ಕೋವಿಡ್ ಕಾರಣದಿಂದ ಈ ಬಾರಿ ಸರಳವಾಗಿ ಪುರಪ್ರವೇಶ ಮೆರವಣಿಗೆ ನಡೆಯಿತು.
ಸ್ತಬ್ಧಚಿತ್ರಗಳು, ಕಲಾತಂಡಗಳ ಪ್ರದರ್ಶನ ಹಾಗೂ ಅದ್ಧೂರಿತನ ಇರಲಿಲ್ಲ. ಬದಲಾಗಿ, ಸಾಂಪ್ರದಾಯಿಕ ಚಂಡೆ, ವಾದ್ಯ, ಬ್ಯಾಂಡ್, ಭಜನೆ, ಸಂಕೀರ್ತನಾ ತಂಡಗಳು ಮೆರವಣಿಯಲ್ಲಿದ್ದವು. ಪಟ್ಟದ ದೇವರಾದ ದ್ವಿಭುಜ ಕಾಳೀಯ ಮರ್ದನ, ಕೃಷ್ಣ, ನರಸಿಂಹ ದೇವರನ್ನು ಚಿನ್ನದ ಪಲ್ಲಕ್ಕಿಯಲ್ಲಿ ಇಡಲಾಗಿತ್ತು.
ಮಂಗಳೂರು: ಬಿಜೆಪಿ ಯುವ ನಾಯಕ ಮಹಮ್ಮದ್ ಅಸ್ಗರ್ ಪಕ್ಷದಿಂದ ಅಮಾನತು – VIshwanews24
ತೆರೆದ ವಾಹನದಲ್ಲಿ ಕುಳಿತ ಕೃಷ್ಣಾಪುರ ಮಠದ ಶ್ರೀಗಳು ರಥಬೀದಿ ಪ್ರವೇಶಿಸುತ್ತಿದ್ದಂತೆ ಭವ್ಯ ಸ್ವಾಗತ ಕೋರಲಾಯಿತು. ಕನಕನ ಕಿಂಡಿಯಲ್ಲಿ ಕೃಷ್ಣನ ದರ್ಶನ ಮಾಡಿದ ಬಳಿಕ ಅನಂತೇಶ್ವರ, ಚಂದ್ರಮೌಳೇಶ್ವರ ಹಾಗೂ ಮಧ್ವಾಚಾರ್ಯರ ದರ್ಶನ ಮಾಡಿದರು. ಬಳಿಕ ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಗಳು ಅರಳು ಎರಚಿ ಸಾಂಪ್ರದಾಯಬದ್ಧವಾಗಿ ಸ್ವಾಗತ ಕೋರಿದರು.
ನಂತರ ರಥಬೀದಿಯಲ್ಲಿ ಅಭಿನಂದನೆ ಹಾಗೂ ಪೌರ ಸಮ್ಮಾನ ಕಾರ್ಯಕ್ರಮದಲ್ಲಿ ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಗಳು ಹಾಗೂ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಗಳನ್ನು ಸನ್ಮಾನಿಸಲಾಯಿತು.
ಜನವರಿ18ರಂದು ಪರ್ಯಾಯ ಮಹೋತ್ಸವ ನಡೆಯಲಿದೆ. ಅಂದು ಬೆಳಗಿನ ಜಾವ 5.55ಕ್ಕೆ ವಿದ್ಯಾಸಾಗರ ತೀರ್ಥರು ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. ಈ ಮೂಲಕ ಮುಂದಿನ 2 ವರ್ಷಗಳ ಕಾಲ ಕೃಷ್ಣನ ಪೂಜಾಧಿಕಾರವನ್ನು ಪಡೆದುಕೊಳ್ಳಲಿದ್ದಾರೆ.
ಚಿಕ್ಕಮಗಳೂರು : ಕೇಸರಿ ಶಾಲು ಹಾಗೂ ಸ್ಕಾರ್ಫ್ ವಿವಾದಕ್ಕೆ ಶಾಂತಿಯುತ ತೆರೆ – Vishwanews24
ಕೋವಿಡ್ ಕಾರಣದಿಂದ ಈ ಬಾರಿ ಪರ್ಯಾಯ ಉತ್ಸವವನ್ನು ಸರಳ ಹಾಗೂ ಸಂಪ್ರದಾಯ ಬದ್ಧವಾಗಿ ಆಚರಿಸಲು ನಿರ್ಧರಿಸಲಾಗಿದೆ.
