ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ರಘುಪತಿ ಭಟ್ ಎಪ್ರಿಲ್ 23 ರಂದು ನಾಮ ಪತ್ರ ಸಲ್ಲಿಕೆ

Featured, ಉಡುಪಿ

ಉಡುಪಿ: ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಕೆ.ರಘುಪತಿ ಏಪ್ರಿಲ್ 23 ರಂದು ಬೆಳಗ್ಗೆ 12 ಗಂಟೆಗೆ ನಾಮ‌ಪತ್ರ ಸಲ್ಲಿಸಲಿದ್ದೆನೆ ಎಂದು ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನಾಮ‌ಪತ್ರ ಸಲ್ಲಿಸುವ ಮುನ್ನ ಉಡುಪಿಯ ಚಿತ್ತರಂಜನ್ ಸರ್ಕಲ್ ನಲ್ಲಿ ಕಾರ್ಯಕರ್ತರ ಬೃಹತ್‌ ಸಮಾವೇಶ ನಡೆಯಲಿದೆ ಎಂದರು.

ಅಭಿವೃದ್ಧಿಯೇ ಬಿಜೆಪಿಗೆ ಶ್ರೀ ರಕ್ಷೆಯಾಗಿರುವುದರಿಂದ ಮತ್ತು ಉಡುಪಿ ಕ್ಷೇತ್ರದಲ್ಲಿ ನನ್ನ ಅವಧಿಯಲ್ಲಿ ಆಗಿರುವ ಕೆಲಸ ಕಾರ್ಯಗಳನ್ನು ನೋಡಿ ಜನ ಮತ ಹಾಕುತ್ತರೆಂಬ ನಂಬಿಕೆಯಿದೆ ಹಾಗಾಗಿ ಬಹುಮತ ಅಂತರದಿಂದ ಈ ಭಾರಿ ಉಡುಪಿಯಲ್ಲಿ ಬಿಜೆಪಿ ಗದ್ದುಗೆಯನ್ನೆರಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಯುವಮೋರ್ಚ ಜಿಲ್ಲಾಧ್ಯಕ್ಷ ಶ್ರೀಶ ನಾಯಕ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ್ ಬಾಬು,ಮಹೇಶ್ ಠಾಕೂರು,ಕಪ್ಪೆಟ್ಟು ಪ್ರವೀಣ್ ಕುಮಾರ್ ಶೆಟ್ಟಿ, ರವಿ ಅಮೀನ್ ಉಪಸ್ಥಿತಿತರಿದ್ದರು.