ಉಡುಪಿ: ಗ್ಯಾಸ್ ಬೆಲೆ ಗಗನಕ್ಕೇರಿದರೂ ಸಂಸದೆ ಶೋಭಾ ಕರಂದ್ಲಾಜೆ, ಲೋಕಸಭೆ ಸದಸ್ಯರು ಯಾರು ಮಾತನಾಡುತ್ತಿಲ್ಲ : ವಿನಯ್ ಕುಮಾರ್ ಆಕ್ರೋಶ -Vishwanews24

Featured, ಉಡುಪಿ

ಉಡುಪಿ: ಗ್ಯಾಸ್ ಬೆಲೆ ಗಗನಕ್ಕೇರಿದರೂ ಸಂಸದೆ ಶೋಭಾ ಕರಂದ್ಲಾಜೆ, ಲೋಕಸಭೆ ಸದಸ್ಯರು ಯಾರು ಮಾತನಾಡುತ್ತಿಲ್ಲ : ವಿನಯ್ ಕುಮಾರ್ ಆಕ್ರೋಶ -Vishwanews24

ಉಡುಪಿ,: ಇಂಧನ, ಗ್ಯಾಸ್ ಬೆಲೆ ಗಗನಕ್ಕೇರುತ್ತಿದೆ. ಆದರೆ ಈಗ ಸಂಸದೆ ಶೋಭಾ ಕರಂದ್ಲಾಜೆಯಾಗಲಿ, ಲೋಕಸಭೆ ಸದಸ್ಯರು ಯಾರು ಮಾತನಾಡುತ್ತಿಲ್ಲ. ಮಲ್ಪೆ- ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಮೇಲ್ದರ್ಜೆಗೆ ಏರಿ ಏಳು ವರ್ಷಗಳೇ ಕಳೆದಿವೆ ಆದರೆ ಇಲ್ಲಿಗೆ ಬಂದ ಅನುದಾನ ಬೇರೆ ಕಡೆಗೆ ವಿನಿಯೋಗ ಆಗ್ತಿದೆ. ಕೇವಲ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಟೀಕಿಸಿದ್ದಾರೆ.

ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಅನ್ವಯವಾಗುವಂತೆ, ನಾವು ಜನಸಂಪರ್ಕ ಸಭೆಯನ್ನು ನಡೆಸಿ ಜನಾಭಿಪ್ರಾಯ ಕಲೆ ಹಾಕಿ ಒಂದು ವರದಿ ತಯಾರಿಸಿದ್ದೆವು. ಆದರೆ ಅದನ್ನು ಕಸದ ಬುಟ್ಟಿಗೆ ಎಸೆದರು. ಕಸ್ತೂರಿ ರಂಗನ್ ವರದಿಯಿಂದಾಗಿ ರಾಜ್ಯದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಯಿತು.

ಇದನ್ನೂ ಓದಿ : ಮಂಗಳೂರು : ಮೀನಿನಂಗಡಿಗೆ ತಂದಿದ್ದ ರೀಫ್ ಕೋಡ್ ಫಿಶ್ ಹೊಟ್ಟೆಯಲ್ಲಿ ಬರೋಬ್ಬರಿ 10 ಕೆ.ಜಿ.ಯಷ್ಟು ಪ್ಲಾಸ್ಟಿಕ್ ತ್ಯಾಜ್ಯ ಪತ್ತೆ ! -Vishwanews24

ಕಾಂಗ್ರೆಸ್ ಆಡಳಿತದಲ್ಲಿರುವಾಗ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಕೃಷಿ ಕಾರ್ಮಿಕರಿಗೆ ಭೂಮಿ, ಕುಡಿಯುವ ನೀರಿನ ವ್ಯವಸ್ಥೆಗೆ ಸ್ವಜಲಧಾರೆ ಯೋಜನೆ, ಬಡವರಿಗೆ ಬಿಪಿಎಲ್ ಕಾರ್ಡ್, ಬಡಗುಬೆಟ್ಟುವಿನಲ್ಲಿ ಒಂದು ಕೋಟಿ ರೂಪಾಯಿಯ ಟ್ರೀ ಪಾರ್ಕ್ ಹೀಗೆ ಅನೇಕ ಯೋಜನೆಯನ್ನು ಹಮ್ಮಿಕೊಂಡು ಅತೀ ಹೆಚ್ಚು ಅನುದಾನವನ್ನು ಜಿಲ್ಲೆಗೆ ಪಡೆದು ಕೊಂಡಿದ್ದೆವು ಎಂದು ಸೊರಕೆ ನೆನಪಿಕೊಂಡರು.

ಪಾದಯಾತ್ರೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಎ. ಗೂರ್, ಕಾರ್ಯದರ್ಶಿ ರಾಜಶೇಖರ್ ಕೋಟ್ಯಾನ್, ಉಡುಪಿ ತಾಪಂ ಸದಸ್ಯೆ ಡಾ. ಸುನೀತಾ ಶೆಟ್ಟಿ, ಕೀರ್ತಿ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ನಗರಸಭೆ ಸದಸ್ಯ ರಮೇಶ್ ಕಾಂಚನ್, ಯತೀಶ್ ಕರ್ಕೇರ, ಶಶಿಧರ ಶೆಟ್ಟಿ ಎಲ್ಲೂರು, ಅಲೆವೂರು ಹರೀಶ್ ಕಿಣಿ, ಕಾಪು ಬ್ಲಾಕ್ ಕಾಂಗ್ರೆಸ್(ಉತ್ತರ ವಲಯ) ಅಧ್ಯಕ್ಷ ಪ್ರವೀಣ್ ಶೆಟ್ಟಿ, ಶಾಂತಾರಾಮ ಸೂಡ, ನವೀನ್‌ಚಂದ್ರ ಶೆಟ್ಟಿ, ಲಕ್ಷ್ಮೀನಾರಾಯಣ ಪ್ರಭು, ಉದ್ಯಾವರ ನಾಗೇಶ್ ಕುಮಾರ್, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್ ಸಾಲ್ಯಾನ್ , ರೋಶನಿ ಒಲಿವೆರಾ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಮುಂತಾದವರು ಪಾಲ್ಗೊಂಡಿದ್ದರು.

ಇದನ್ನೂ ಓದಿ : ಉಡುಪಿ: ಮಾ 27ರಂದು ಮೀನು ಮಾರಾಟ ಫೆಡರೇಶನ್ ವತಿಯಿಂದ ಸಿಗ್ನಾ ಹೆಲ್ತ್ ಕಾರ್ಡ್ ಮತ್ತು ವಿದ್ಯಾರ್ಥಿ ವೇತನ ವಿತರಣೆ -Vishwanews24