ಉಡುಪಿ: ಜಿಲ್ಲಾಸ್ಪತ್ರೆ ಸ್ಕ್ಯಾನಿಂಗ್, ಎಂಆರ್‌ಐ ಸೇವೆ ಪುನರಾರಂಭ – vishwanews24
ಉಡುಪಿ: ಜಿಲ್ಲಾಸ್ಪತ್ರೆ ಸ್ಕ್ಯಾನಿಂಗ್, ಎಂಆರ್‌ಐ ಸೇವೆ ಪುನರಾರಂಭ
ಉಡುಪಿ: ಜಿಲ್ಲಾಸ್ಪತ್ರೆ ಸಹಿತ ರಾಜ್ಯಾದ್ಯಂತ ಸ್ಕ್ಯಾನಿಂಗ್ ಹಾಗೂ ಎಂಆರ್‌ಐ ಸೇವೆ ಗುತ್ತಿಗೆ ಪಡೆದ ಕಂಪೆನಿಗೆ ರಾಜ್ಯ ಸರಕಾರ ಬಿಲ್ ಪಾವತಿಸದ ಕಾರಣ ರೋಗಿಗಳಿಗೆ ಸೇವೆ ಸಿಗದೆ ಸಂಕಷ್ಟ ಎದುರಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಸೂಚನೆ ಮೇರೆಗೆ ಮತ್ತೆ ಸೇವೆ ಮುಂದುವರಿದಿದೆ.
ಬಿಲ್ ಪಾವತಿಯಾಗುವವರೆಗೆ ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟುಮಾಡದಂತೆ ಸಂಬಂಧಪಟ್ಟ ಏಜೆನ್ಸಿಗೆ ಸೂಚನೆ ನೀಡಲಾಗಿದೆ. ಶುಕ್ರವಾರದಿಂದ ತುರ್ತು ಹಾಗೂ ರೆಗ್ಯುಲರ್ ಸೇವೆ ಯಥಾಸ್ಥಿತಿಯಲ್ಲಿ ಮುಂದುವರಿಯಿತು.
