ಉಡುಪಿ: ಜಿಲ್ಲಾ ಕ್ಯಾಟರಿಂಗ್‌ ಮಾಲಕರ ಸಂಘ ಉದ್ಘಾಟನೆ – Vishwanews24

Featured, ಉಡುಪಿ

ಉಡುಪಿ: ಜಿಲ್ಲಾ ಕ್ಯಾಟರಿಂಗ್‌ ಮಾಲಕರ ಸಂಘ ಉದ್ಘಾಟನೆ

ಉಡುಪಿ: ಉಡುಪಿ ಜಿಲ್ಲಾ ಕ್ಯಾಟರಿಂಗ್‌ ಮಾಲಕರ ಸಂಘದ ಉದ್ಘಾಟನೆ ಕಾರ್ಯಕ್ರಮ ಮಂಗಳ ವಾರಸಂತೆಕಟ್ಟೆ ಲಕ್ಷ್ಮೀನಗರದ ಗ್ರೀನ್‌ ಎಕರ್ಷ್‌ನಲ್ಲಿ ಜರಗಿತು.

ಕೇಮಾರು ಸಾಂದೀಪನೀ ಸಾಧನಾ ಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ, ಉಡುಪಿ ಡಯಾಸಿಸ್‌ನ ವಿಕಾರ್‌ ಜನರಲ್‌ ವಂ| ಫರ್ಡಿನಾಂಡ್‌ ಗೊನ್ಸಾಲ್ವಿಸ್‌ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು.

ಈಶವಿಠಲದಾಸ ಶ್ರೀಗಳು ಮಾತನಾಡಿ, ಸಂಘಟನೆಗಳಿಂದ ಪರಿಹಾರ ಸಾಧ್ಯವಿದೆ. ಕಾರ್ಯ ಕ್ರಮಗಳಲ್ಲಿ ಗುಣಮಟ್ಟದ ಆಹಾರ ಒದಗಿಸುವ ಮೂಲಕ ಎಲ್ಲ ಕ್ಯಾಟರಿಂಗ್‌ ಸಂಸ್ಥೆಗಳು ಉತ್ತಮ ಹೆಸರುಗಳಿಸಿ ಅಭಿವೃದ್ಧಿ ಹೊಂದ ಬೇಕು ಎಂದರು. ಮಾಲಕರು, ನೌಕರರ ಮಕ್ಕಳು ಶಿಕ್ಷಣ, ಆರೋಗ್ಯದ ಬಗ್ಗೆ ಮುತುವರ್ಜಿ ವಹಿಸುವಂತೆ ಸಲಹೆ ನೀಡಿದರು.

ಇಂದಿನಿಂದ ಉಡುಪಿಯಲ್ಲಿ ಭಾರತ್ ಅಕ್ಕಿ ಮಾರಾಟಕ್ಕೆ ಚಾಲನೆ: ಯಶ್ ಪಾಲ್ ಸುವರ್ಣ – Vishwanews24

ವಂ| ಫರ್ಡಿನಾಂಡ್‌ ಗೊನ್‌ಸಾಲ್ವಿಸ್‌ ಮಾತನಾಡಿ, ಜನರ ಹಸಿವು ನೀಗಿಸುವ, ಊಟ ಕೊಡುವ ಪುಣ್ಯದ ಕಾರ್ಯವನ್ನು ಕ್ಯಾಟರಿಂಗ್‌ ಸಂಸ್ಥೆಗಳು ನಿರ್ವಹಿಸುತ್ತಿವೆ. ಎಲ್ಲರೂ ಸಂಘಟಿತರಾಗಿದ್ದರೆ ಸಾಧನೆ ಮಾಡಲು ಸಾಧ್ಯ. ಉತ್ತಮ ಊಟೋಪಚಾರದ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಿ ಎಲ್ಲ ಕ್ಯಾಟರಿಂಗ್‌ ಸಂಸ್ಥೆಗಳು ಜನರ ಪ್ರೀತಿಗೆ ಪಾತ್ರರಾಗಬೇಕು ಎಂದು ಹಾರೈಸಿದರು.

ಸಂಘದ ಉಪಾಧ್ಯಕ್ಷ ಜೂಲಿ ಯಸ್‌ ಲಿವೀಸ್‌ ದಾನಿಗಳ ಪಟ್ಟಿ ವಾಚಿಸಿ ದರು. ಕಾರ್ಯದರ್ಶಿ ಗಣೇಶ್‌ ಸಾಲ್ಯಾನ್‌ ವಂದಿಸಿದರು. ಗೌರವ ಸಲಹೆಗಾರ ಡೇನಿಷ್‌ ರಾಡ್ರಿಗಸ್‌ ಪ್ರಸ್ತಾವನೆಗೈದು, ಕೋಶಾಧಿಕಾರಿ ದೀಕ್ಷಿತ್‌ ಶೆಟ್ಟಿ ಸ್ವಾಗತಿಸಿ, ಆಲ್ವಿನ್‌ ಅಂದ್ರಾದೆ ನಿರೂಪಿಸಿದರು.

ಸುರತ್ಕಲ್: ನಾಪತ್ತೆಯಾಗಿದ್ದ ನಾಲ್ವರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮೃತದೇಹ ಪತ್ತೆ – Vishwanews24

Leave a Reply