ಉಡುಪಿ: ಟಿಪ್ಪು ಬದಲು ಸಂತ ಶಿಶುನಾಳ ಶರೀಫ ಜಯಂತಿ ಆಚರಿಸಲು ಚಿಂತನೆ : ಸಿ.ಟಿ.ರವಿ -Vishwanews24
ಉಡುಪಿ: ಟಿಪ್ಪು ಜಯಂತಿ ಬದಲು ಯಡಿಯೂರಪ್ಪ ಸರ್ಕಾರ ಸಂತ ಶಿಶುನಾಳ ಶರೀಫರ ಜಯಂತಿ ಆಚರಿಸಲು ಚಿಂತನೆ ನಡೆಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ.ರವಿ ಮಾಹಿತಿ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶಿಶುನಾಳ ಶರೀಫರ ಜಯಂತಿ ಆಚರಣೆ ಮಾಡುವ ಬಗ್ಗೆ ನನಗೆ ಅಪೇಕ್ಷೆ ಇದೆ. ಶಿಶುನಾಳ ಶರೀಫರು ಹಿಂದೂ ಮುಸಲ್ಮಾನರು ಒಪ್ಪಿಕೊಂಡ ವ್ಯಕ್ತಿ. ಎರಡೂ ಧರ್ಮ ಖುಷಿ ಪಡುವ ಆಚರಣೆ ಇದಾಗಬಹುದು. ಡಾ.ಎಪಿಜೆ ಅಬ್ದುಲ್ ಕಲಾಂ ಜಯಂತಿಯನ್ನೂ ಮಾಡಬಹುದು. ಕಲಾಂ ದೇಶದ ವಿದ್ಯಾರ್ಥಿಗಳಿಗೆ ಪ್ರೇರಣೆ ಕೊಟ್ಟ ವ್ಯಕ್ತಿ. ಮೊದಲು ರಾಜ್ಯಾದ್ಯಂತ ಎಲ್ಲ ಜಯಂತಿ ಆಚರಣೆಗಳ ಸ್ವರೂಪ ಸಂಗ್ರಹ ಮಾಡುತ್ತೇವೆ ಬಳಿಕ ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದು ತಿಳಿಸಿದರು.
ನಮ್ಮ ದೇಶದಲ್ಲಿ ಎಲ್ಲ ಜಯಂತಿಗಳು ರಾಜಕೀಯಕರಣಗೊಳ್ಳುವುದರಿಂದ ಎಲ್ಲ ಪಕ್ಷಗಳ ನಾಯಕರ ಅಭಿಪ್ರಾಯ ಪಡೆಯುತ್ತೇನೆ. ನಂತರ ಕ್ಯಾಬಿನೆಟ್ನಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸಮಾಲೋಚನೆ ನಡೆಸಿಯೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.
ಜಯಂತಿ ಆಚರಣೆಯ ಸ್ವರೂಪದ ಬಗ್ಗೆ ಎಲ್ಲಾ ಕಡೆಯಿಂದ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಎಲ್ಲಾ ಜಿಲ್ಲೆಗಳಿಂದ ಅಭಿಪ್ರಾಯ ಸಂಗ್ರಹಣೆ ಮಾಡುತ್ತೇವೆ. ನಮ್ಮ ದೇಶದಲ್ಲಿ ಎಲ್ಲವೂ ರಾಜಕೀಯಕರಣಗೊಳ್ಳುತ್ತದೆ. ಈ ಬಗ್ಗೆ ಎಲ್ಲಾ ಪಕ್ಷಗಳ ನಾಯಕರ ಅಭಿಪ್ರಾಯ ಪಡೆಯುತ್ತೇನೆ. ಕ್ಯಾಬಿನೆಟ್ನಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸಮಾಲೋಚನೆ ನಡೆಸಿಯೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
