ಉಡುಪಿ:  ತಜ್ಞ ವೈದ್ಯರ ಹುದ್ದೆಗೆ ಅರ್ಜಿ ಆಹ್ವಾನ – Vishwanews24

Featured, ಉಡುಪಿ

ಉಡುಪಿ:  ತಜ್ಞ ವೈದ್ಯರ ಹುದ್ದೆಗೆ ಅರ್ಜಿ ಆಹ್ವಾನ

ಉಡುಪಿ: ಉಡುಪಿ ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ಎನ್‌ಪಿ-ಎನ್‌ಸಿಡಿ, ಎಂ.ಪಿ.ಎಚ್.ಸಿ.ಇ, ಎನ್‌ಪಿಸಿ ಕಾರ್ಯಕ್ರಮದಡಿ ಜಿಲ್ಲಾ ಆಸ್ಪತ್ರೆ ಉಡುಪಿಯಲ್ಲಿ ಖಾಲಿ ಇರುವ ಒಟ್ಟು 6 ತಜ್ಞ ವೈದ್ಯರ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲು 1 ಎಂಡಿ ಕಾರ್ಡಯಾಲಜಿ ಅಥವಾ ಫಿಜಿಷಿಯನ್, 3ಎಂಡಿ ಫಿಜಿಷಿಯನ್, 02 ಎಂಡಿ ಫಿಜಿಶಿಯನ್ ಅಥವಾ ಎಂಡಿ ಅನಸ್ತೇಶಿಯ ಅಥವಾ ಎಂಡಿ ರೇಡಿಯೋ ಥೆರಪಿ ಅಭ್ಯರ್ಥಿ ಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ವೇತನ 1.10 ಲಕ್ಷ ರೂಪಾಯಿ. ಆಸಕ್ತ ಅಭ್ಯರ್ಥಿಗಳು ಸೆ.20ರಂದು ಬೆಳಗ್ಗೆ 10:30ರಿಂದ 1 ಗಂಟೆವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಉಡುಪಿ ಇಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಶೈಕ್ಷಣಿಕ ಮೂಲದಾಖಲಾತಿಗಳೊಂದಿಗೆ ಹಾಜರಾಗಬಹುದು ಎಂದು ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು:  ಗಣೇಶ ಚತುರ್ಥಿ ಆಚರಣೆಗೆ ಸೆ.19ಕ್ಕೆ ರಜೆ ನೀಡಲು ಸಚಿವರ ಸೂಚನೆ – Vishwanews24

Leave a Reply