ಉಡುಪಿ: ತಾನು ಶಾಸಕನಾದ ಬಳಿಕ ಯುವ ಜನತೆಗೆ ಇಲ್ಲೇ ಉದ್ಯೋಗ ದೊರಕಿಸಿಕೊಡುವ ಪ್ರಯತ್ನ ಮಾಡುವೆನು : ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ – Vishwanews24
ಉಡುಪಿ: ತಾನು ಶಾಸಕನಾದ ಬಳಿಕ ಯುವ ಜನತೆಗೆ ಇಲ್ಲೇ ಉದ್ಯೋಗ ದೊರಕಿಸಿಕೊಡುವ ಪ್ರಯತ್ನ ಮಾಡುವೆನು : ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್
ಉಡುಪಿ: ಉಡುಪಿಯಲ್ಲಿ ಪರಿಸರ ಸ್ನೇಹಿ ಉದ್ಯಮಗಳನ್ನು ಸ್ಥಾಪಿಸಿ ಯುವ ಜನತೆಗೆ ಇಲ್ಲೇ ಉದ್ಯೋಗ ದೊರಕಿಸಿಕೊಟ್ಟರೆ ಹೆತ್ತವರೂ ಬಹಳ ಸಂತೋಷದಿಂದ ಮಕ್ಕಳ ಜತೆಗೇನೆ ಬದುಕುತ್ತಾರೆ, ಈ ನಿಟ್ಟಿನಲ್ಲಿ ತಾನು ಶಾಸಕನಾದ ಬಳಿಕ ತೀವ್ರವಾಗಿ ಪ್ರಯತ್ನ ಮಾಡುವೆನು. ಉದ್ಯಮಗಳು ಬರಬೇಕಾದರೆ ಸುಸಜ್ಜಿತ ಮೂಲಭೂತ ಸೌಕರ್ಯಗಳೂ ಇರಬೇಕು ಅದಲ್ಲದೇ ಸಮಾಜದಲ್ಲಿ ಶಾಂತಿ ಸೌಹಾರ್ದತೆಯೂ ನೆಲೆಸಿರಬೇಕು, ಇವೆಲ್ಲವೂ ಸಾಧ್ಯ ಆಗಬೇಕಾದರೆ ಉಡುಪಿಯ ಜನ ತನಗೆ ಆಶೀರ್ವಾದ ಮಾಡಿ ಗೆಲ್ಲಿಸಬೇಕು ಎಂದು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಹೇಳಿದರು.
ಅವರು ಉಡುಪಿ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಬಹಳ ಮುಖ್ಯವಾಗಿ ಕುಡಿಯವ ನೀರಿನ ಸಮಸ್ಯೆ ಹಾಗೂ ಒಳ ಚರಂಡಿ ಸಮಸ್ಯೆ ಉಡುಪಿ ನಗರದಲ್ಲಿ ಮತದಾರರು ಎತ್ತುತ್ತಿದ್ದ ಸಮಸ್ಯೆ ಆಗಿದ್ದು ಇವುಗಳಿಗೆ ಒಂದು ವೈಜ್ಞಾನಿಕ ಪರಿಹಾರವನ್ನೂ ಹುಡುಕಿ ಅನುಷ್ಠಾನಕ್ಕೆ ತರುವ ಭರವಸೆ ನೀಡಿದರು.
ಕಾಪು : ಬಿಜೆಪಿ ಗೆಲ್ಲಲು ಕಾಪುವಿನಲ್ಲಿ ವಿಜಯ ಸಂಕಲ್ಪ ರಥ ಯಾತ್ರೆಗೆ ಚಾಲನೆ – Vishwanews24
