ಉಡುಪಿ: ‘ತಾಯಿ, ಮಕ್ಕಳ ಆಸ್ಪತ್ರೆಯನ್ನು ನಡೆಸಲು ಸರ್ಕಾರ ಸಿದ್ದವಿದೆ’ : ಸಚಿವ ಸುಧಾಕರ್‌ -Vishwanews24

Featured, ಉಡುಪಿ

ಉಡುಪಿ: ‘ತಾಯಿ, ಮಕ್ಕಳ ಆಸ್ಪತ್ರೆಯನ್ನು ನಡೆಸಲು ಸರ್ಕಾರ ಸಿದ್ದವಿದೆ’ : ಸಚಿವ ಸುಧಾಕರ್‌ -Vishwanews24

ಉಡುಪಿ : ಪಿಪಿಪಿ ಮಾದರಿಯಲ್ಲಿ ಸ್ಥಾಪನೆಗೊಂಡ ಉಡುಪಿಯ ತಾಯಿ, ಮಕ್ಕಳ ಆಸ್ಪತ್ರೆ ಹಾಗೂ ಕಂಪೆನಿ ತನ್ ಅಸಮರ್ಥತೆಯ ಬಗ್ಗೆ ಆಸ್ಪತ್ರೆಯನ್ನು ನಡೆಸುವ ಬಗ್ಗೆ ಇತ್ತೀಚೆಗೆ ಸರ್ಕಾರಕ್ಕೆ ಪತ್ರ ಬರೆದಿತ್ತು.

250 ಬೆಡ್‌ನ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, “ಈ ಸಮಸ್ಯೆಗೆ ಸಂಬಂಧಿಸಿದಂತೆ ನಾವು ಕೊನೆಯ ಹಂತದ ಮಾತುಕತೆಯಲ್ಲಿದ್ದೇವೆ. ತಾಯಿ ಹಾಗೂ ಮಕ್ಕಳ ಆಸ್ಪತ್ರೆಯನ್ಮು ನಡೆಸಲು ಸರ್ಕಾರ ಸಿದ್ದವಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಎದುರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ನೀಡಿದ ಭೂಮಿಯನ್ನು ಸರ್ಕಾರ ತೆಗೆದುಕೊಳ್ಳಲಿದ್ದು, ಭೂಮಿಯನ್ನು ಅಭಿವೃದ್ದಿ ಪಡಿಸಲಿದೆ” ಎಂದು ಹೇಳಿದರು.

“ಖಾಸಗಿ ಆಡಳಿತವು ಒದಗಿಸಿದ ರೀತಿಯ ಸೇವೆಗಳನ್ನು ಸರ್ಕಾರವು ಒದಗಿಸುತ್ತದೆ” ಎಂದು ತಿಳಿಸಿದರು.

“ಆಯುಷ್ಮಾನ್‌ ಯೋಜನೆಯಡಿ 50 ಲಕ್ಷ ರೂ. ಮಂಜೂರು ಮಾಡಲಾಗಿದ್ದು, ಆಸ್ಪತ್ರೆಯ ಸಿಬ್ಬಂದಿಗಳ ವೇತನ ಪಾವತಿಗಾಗಿ ಬಳಕೆ ಮಾಡಲಾಗುವುದು” ಎಂದು ಹೇಳಿದರು.