ಉಡುಪಿ ನಗರಸಭಾ ಮೂಡುಪೆರಂಪಳ್ಳಿ ವಾರ್ಡಿನ ಉಪಚುನಾವಣೆ : ಕೆ. ಉದಯ್ ಕುಮಾರ್ ಶೆಟ್ಟಿ ಮನೆ – ಮನೆ ಪ್ರಚಾರ – vishwanews24
ಉಡುಪಿ ನಗರಸಭಾ ಮೂಡುಪೆರಂಪಳ್ಳಿ ವಾರ್ಡಿನ ಉಪಚುನಾವಣೆ : ಕೆ. ಉದಯ್ ಕುಮಾರ್ ಶೆಟ್ಟಿ ಮನೆ – ಮನೆ ಪ್ರಚಾರ
ಉಡುಪಿ ನಗರಸಭೆಯ ಮೂಡುಪರೆಂಪಳ್ಳಿ ವಾರ್ಡಿಗೆ ನಡೆಯುವ ಉಪ ಚುನಾವಣೆಯ ಪ್ರಯುಕ್ತ ಮನೆ – ಮನೆಗೆ ತೆರಳಿ ಚುನಾವಣಾ ಪ್ರಚಾರ ಅಭಿಯಾನದಲ್ಲಿ ಬಿಜೆಪಿ ಅಭ್ಯರ್ಥಿ ಅನಿಟಾ ಬೆಲಿAಡಾ ಡಿ’ಸೋಜಾ ಪರವಾಗಿ ಮಂಗಳೂರು ವಿಭಾಗ ಪ್ರಭಾರಿ ಶ್ರೀ ಕೆ. ಉದಯ ಕುಮಾರ್ ಶೆಟ್ಟಿ ಇವರು ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಶ್ರೀಮತಿ ಗೀತಾಂಜಲಿ ಸುವರ್ಣ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಾಲಕೃಷ್ಣ ಶೆಟ್ಟಿ, ನಗರಸಭಾ ಸದಸ್ಯರಾದ ರಜನಿ ಮಂಜುನಾಥ್ ಹೆಬ್ಬಾರ್, ಗಿರೀಶ್ ಅಂಚನ್, ಮಾಜಿ ನಗರ ಸಭಾ ಸದಸ್ಯೆ ಅರುಣಾ ಪೂಜಾರಿ, ಉಡುಪಿ ನಗರ ಮಂಡಲ ಕಾರ್ಯದರ್ಶಿ ದಿನೇಶ್ ಅಮೀನ್, ಅಶ್ವಿನಿ ಶೆಟ್ಟಿ, ರಾಧಾಕೃಷ್ಣ ಶೆಟ್ಟಿ, ದೊಡ್ಡಣಗುಡ್ಡೆ, ಮಹಿಳಾ ಮೋರ್ಚಾ ಪ್ರಮುಖರಾದ ದಯಾಶಿನಿ, ಸುಜಲಾ ಮುಂತಾದವರು ಉಪಸ್ಥಿತರಿದ್ದರು.
ಮಂಗಳೂರು: ಮೀನಿನ ಲಾರಿ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು – vishwanews24
