ಉಡುಪಿ ನಗರ ಠಾಣಾ ಎಸ್.ಐ ಅನಂತ ಪದ್ಮನಾಭ ಅಮಾನತು -Vishwanews24

Featured, ಉಡುಪಿ

ಉಡುಪಿ: ಉಡುಪಿ ನಗರ ಠಾಣಾ ಎಸ್.ಐ ಅನಂತ ಪದ್ಮನಾಭ ಅವರನ್ನು ಉಡುಪಿಯ ಭುಜಂಗ ಪಾರ್ಕ್ ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ನವೆಂಬರ್ 11 ರಿಂದ ಅಮಾನತು ಮಾಡಲಾಗಿದೆ.

ಮೂವರು ಹುಡುಗರು ಒಂದು ಹುಡುಗಿಯೊಂದಿಗೆ ಮಾತನಾಡುತ್ತ ಕುಳಿತಿರುವಾಗ ಏಕಾಏಕಿ ಬಂದ ಕೆಲವರು ಗುರುತು ಚೀಟಿ ಕೇಳಿ ನೈತಿಕ ಪೊಲೀಸ್ ಗಿರಿ ನಡೆಸಿದ್ದರು ಎಂಬ ಆರೋಪದ ಘಟನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಅಮಾನತು ಮಾಡಲಾಗಿದೆ. ಈ ಘಟನೆಯ ಸೂಕ್ಷ್ಮತೆ ಅರಿತು ಠಾಣಾಧಿಕಾರಿ ಎಸ್.ಪಿ ನಿಷಾ ಜೇಮ್ಸ್ ಗೆ ತಿಳಿಸಿಲ್ಲವೆಂಬ ಆರೋಪ ಅವರ ಮೇಲಿದೆ.

ಎರಡು ಕಡೆಯಿಂದ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.