ಉಡುಪಿ : ನಿಟ್ಟೂರು ಪ್ರೌಢಶಾಲೆಯಲ್ಲಿ ಶ್ರೀ ಪಿ.ಎಲ್. ಅಣ್ಣಾಜಿ ರಾವ್ ದತ್ತಿನಿಧಿ ವಿದ್ಯಾರ್ಥಿವೇತನ ವಿತರಣೆ -Vishwanews24
ಉಡುಪಿ : ನಿಟ್ಟೂರು ಪ್ರೌಢಶಾಲೆಯಲ್ಲಿ ಶ್ರೀ ಪಿ.ಎಲ್. ಅಣ್ಣಾಜಿ ರಾವ್ ದತ್ತಿನಿಧಿ ವಿದ್ಯಾರ್ಥಿವೇತನ ವಿತರಣೆ -Vishwanews24
ಉಡುಪಿ : ಶಾಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ೨೫ ವಿದ್ಯಾರ್ಥಿಗಳಿಗೆ ಶ್ರೀ ಪಿ.ಲ್. ಅಣ್ಣಾಜಿ ರಾವ್ ದತ್ತಿನಿಧಿಯಿಂದ ತಲಾ ಒಂದುಸಾವಿರ ರೂಪಾಯಿ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.
ಶ್ರೀ ಪಿ.ಎಲ್. ಅಣ್ಣಾಜಿ ರಾವ್, ಇವರ ಪುತ್ರ ಶ್ರೀ ಪಿ.ಎಲ್. ರಾವ್ ವಿದ್ಯಾರ್ಥಿಗಳು ತಮ್ಮ ಬಡತನವನ್ನು ಲೆಕ್ಕಿಸದೆ ಕಲಿಕೆಯಲ್ಲಿ ಸಾಧನೆಗೈಯಬೇಕು. ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ, ಎಲ್ಲ ಅವಕಾಶಗಳನ್ನು ಬಳಸಿಕೊಂಡು ತಮ್ಮ ವ್ಯಕ್ತಿತ್ವ ವಿಕಸಿಸಿಕೊಳ್ಳಬೇಕು ಎಂದರು. ಮುಖ್ಯೋಪಾಧ್ಯಾಯಿನಿ ಅನಸೂಯ ಪಿ.ಎಲ್. ಅಣ್ಣಾಜಿ ರಾವ್ ದತ್ತಿನಿಧಿ ವಿದ್ಯಾರ್ಥಿವೇತನವನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಕಲಿಕೆಯಲ್ಲಿ ಸಾಧನೆಗೈಯಬೇಕು. ನಿರಂತರವಾಗಿ ವಿದ್ಯಾರ್ಥಿವೇತನ ನೀಡುತ್ತಿರುವ ಪಿ.ಎಲ್. ಆಣ್ಣಾಜಿ ರಾವ್ ದತ್ತಿನಿಧಿ ಪ್ರತಿಷ್ಠಾನ ಈ ಕಾರ್ಯ ಶ್ಲಾಘನೀಯ ಎಂದರು. ಪಿ.ಎಲ್. ರಾವ್ ಪುತ್ರ ರಮೇಶ್ ರಾವ್ ಉಪಸ್ಥಿತರಿದ್ದರು.
