ಉಡುಪಿ : ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ದಾಳಿ ; ರಾಸಾಯನಿಕಯುಕ್ತ ಬಾಳೆಹಣ್ಣುಗಳ ನಾಶ ಪಡಿಸಿದ ಅಧಿಕಾರಿಗಳು -vishwanews24

Featured, ಉಡುಪಿ

ಉಡುಪಿ : ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ದಾಳಿ ; ರಾಸಾಯನಿಕಯುಕ್ತ ಬಾಳೆಹಣ್ಣುಗಳ ನಾಶ ಪಡಿಸಿದ ಅಧಿಕಾರಿಗಳು

ಉಡುಪಿ : ಉಡುಪಿಯ ಅಲೆವೂರು, ಕೆಮ್ತೂರು ಹಾಗೂ ದುಗ್ಲಿಪದವು ಪರಿಸರದಲ್ಲಿ ಸಹಾಯಕ ಕಮೀಷನರ್ ರಶ್ಮಿ ಎಸ್.ಆರ್, ಆಹಾರ ಸುರಕ್ಷತಾ ಅಧಿಕಾರಿ ವಿವೇಕ್, ಉಡುಪಿ ತಹಶೀಲ್ದಾರ್ ಗುರುರಾಜ್ ಹಾಗೂ ವಿವಿಧ ಅಧಿಕಾರಿಗಳ ತಂಡಗಳು ಇಂದು ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ಇಂದು ದಿಢೀರ್ ದಾಳಿ ನಡೆಸಿ, ಸುಮಾರು 10 ಕೆ.ಜಿ ಯಷ್ಟು ರಾಸಾಯನಿಕ ಬಳಸಿದ ಬಾಳೆಹಣ್ಣುಗಳನ್ನು ಜಪ್ತಿ ಮಾಡಿ, ನಾಶಪಡಿಸಿದರು.

ಜೊತೆಗೆ ಬಾಳೆಹಣ್ಣಿಗೆ ಬಳಸುತ್ತಿದ್ದ, ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕಗಳು, ಕೃತಕ ಬಣ್ಣ ನೀಡುವ ರಾಸಾಯನಿಕಗಳು, ಅದನ್ನು ಬಳಸಲು ಉಪಯೋಗಿಸುವ ರಾಸಾಯನಿಕಗಳನ್ನು ವಶಪಡಿಸಿಕೊಂಡು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದರು.

Leave a Reply